ಪ್ರಗತಿ ಕುಂಠಿತ ಹಿನ್ನೆಲೆ: ಸರ್ಕಾರಿ ರಜೆ ದಿನಗಳಲ್ಲೂ ಕಾರ್ಯ ನಿರ್ವಹಿಸುವಂತೆ ಮೈಸೂರು ಜಿಲ್ಲಾಧಿಕಾರಿಯಿಂದ ಆದೇಶ…

ಮೈಸೂರು,ಜೂ,21,2019(www.justkannada.in): ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರಗತಿಯಲ್ಲಿ ಕುಂಠಿತವಾದ ಹಿನ್ನೆಲೆ ಸರ್ಕಾರಿ ರಜೆ ದಿನಗಳಲ್ಲೂ ಕಾರ್ಯ ನಿರ್ವಹಿಸುವಂತೆ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಕಾರ್ಯಾಲಯದ ವ್ಯಾಪ್ತಿಗೆ ಬರುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಹೋಬಳಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ನಾಲ್ಕನೇ ಶನಿವಾರ ಹಾಗೂ ಭಾನುವಾರವೂ ಕಾರ್ಯ ನಿರ್ವಹಿಸುವಂತೆ ಮಹತ್ವದ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಪ್ರಗತಿ ಕುಂಠಿತಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಂದ ತೀವ್ರ ಆಕ್ಷೇಪಣೆ ಬಂದಿದ್ದು, ಈ ಹಿನ್ನೆಲೆ ಜೂನ್ ಅಂತ್ಯದೊಳಗೆ ನಿಗದಿಯಾಗಿದ್ದ ಕಾರ್ಯವನ್ನ ಮುಗಿಸುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮೈಸೂರು ಡಿಸಿ ಅಭಿರಾಂ ಜೀ ಶಂಕರ್ ಸೂಚಿಸಿದ್ದಾರೆ. ಪಿಎಂಕೆಐಎಸ್ ಎನ್ ಯೋಜನೆಯಡಿ ಅರ್ಜಿ ಸಲ್ಲಿಸಲು ಬರುವ ರೈತರ ಸ್ವಯಂ ಘೋಷಣೆ ಪಡದು ತಂತ್ರಾಂಶದಲ್ಲಿ ತುರ್ತಾಗಿ ಅಳವಡಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

Key words:  Mysore-DC -ordered – work-government -holidays