ನಾಳೆಯಿಂದ ಕ್ಯಾಪ್ಟನ್ ಅಭಿಮನ್ಯುಗೆ  ಮರದ ಅಂಬಾರಿ ತಾಲೀಮು…

ಮೈಸೂರು,ಅಕ್ಟೋಬರ್,17,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಕ್ಕಿದ್ದು 9 ದಿನಗಳ ಕಾಲ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ ನಡೆಯಲಿದೆ.jk-logo-justkannada-logo

ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ 9 ದಿನಗಳು ಮಾತ್ರ ಬಾಕಿ ಇದೆ. ಅಕ್ಟೋಬರ್ 26 ರಂದು  ಜಂಬೂ ಸವಾರಿ ನಡೆಯಲಿದ್ದು, ಇದಕ್ಕಾಗಿ ಅರಮನೆ ಆವರಣದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಈ ಮಧ್ಯೆ ನಾಳೆಯಿಂದ ಕ್ಯಾಪ್ಟನ್ ಅರ್ಜುನನಿಗೆ ಮರದ ಅಂಬಾರಿ ಹೊರುವ ತಾಲೀಮು ನಡೆಯಲಿದೆ. mysore dasara- Tree -Ambari-workout – Captain- Abhimanyu - tomorrow.

ಈ ಕುರಿತು ಮಾತನಾಡಿರುವ ಆನೆ ವೈದ್ಯ ಡಾ. ನಾಗರಾಜು, ಈ ಬಾರಿಯ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ 9 ದಿನಗಳು ಮಾತ್ರ ಬಾಕಿ  ಇದ್ದು ಹೀಗಾಗಿ ದಸರಾ ಗಜಪಡೆಯ ತಾಲೀಮು ಮತ್ತಷ್ಟು ಚುರುಕು ಮಾಡಲಾಗಿದೆ. 750 ಕೆ. ಜಿ. ತೂಕದ ಚಿನ್ನದ ಅಂಬಾರಿ ಹೊರಲಿರುವ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿಗೆ ನಾಳೆ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತದೆ.  280 ಕೆ. ಜಿ. ತೂಕದ ಮರದ ಅಂಬಾರಿಯ ಜೊತೆಗೆ 300 ಕೆ. ಜಿ‌. ಗೂ ಹೆಚ್ಚಿನ ತೂಕದ ಮರಳಿನ ಮೂಟೆಗಳನ್ನು ಹೊರೆಸಿ ಅಂಬಾ ವಿಲಾಸ ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

Key words: mysore dasara- Tree -Ambari-workout – Captain- Abhimanyu – tomorrow.