ಮೈಸೂರು ದಸರಾ: 58 ಸ್ತಬ್ದಚಿತ್ರಗಳು, 150 ಕ್ಕೂ ಹೆಚ್ಚು ಕಲಾತಂಡಗಳ ಮೆರಗು

ಮೈಸೂರು,ಅಕ್ಟೋಬರ್,2,2025 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಸಿದ್ದತೆ ನಡೆಸಲಾಗುತ್ತಿದ್ದು ಕ್ಯಾಪ್ಟನ್ ಅಭಿಮನ್ಯುಗೆ ಅಂಬಾರಿ ಕಟ್ಟುವ ಕಾರ್ಯ ಆರಂಭವಾಗಲಿದೆ. ಈ ಮಧ್ಯೆ ಈ ಬಾರಿ ದಸರಾ ಜಂಬೂಸವಾರಿಯಲ್ಲಿ 58 ಸ್ತಬ್ದಚಿತ್ರಗಳು ಸೇರಿ 150 ಕ್ಕೂ ಹೆಚ್ಚು ಕಲಾತಂಡಗಳು ಭಾಗಿಯಾಗಿವೆ.

ಹೌದು. ಕರ್ನಾಟಕದ ವಿವಿಧ ಜಿಲ್ಲೆಗಳ ಸ್ಥಬ್ದಚಿತ್ರಗಳು ಕಲಾತಂಡಗಳು ಮೆರವಣಿಗೆಯಲ್ಲಿ ಜನಮನ ಸೂರೆಗೊಳಿಸುತ್ತಿವೆ. ಸುಮಾರು 5 ಕಿ.ಮೀ. ದೂರ ಸಾಗಲಿರುವ ಜಂಬೂ ಸವಾರಿಯಲ್ಲಿ ಆಕರ್ಷಕ ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳು ಸಾಥ್​ ನೀಡುತ್ತಿವೆ.

ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಜನರು ಕಾಯುತ್ತಿದ್ದಾರೆ. ಇನ್ನು ಜಂಬೂ ಸವಾರಿ ಮೆರವಣಿಗೆಯಲ್ಲಿ ವಿಶೇಷ ಟ್ಯಾಬ್ಲ್ಯೂಗಳು ಕಣ್ಮನ ಸೆಳೆಯಲು ಸಜ್ಜಾಗಿವೆ. 31 ಜಿಲ್ಲೆಗಳ ಸ್ತಬ್ಧಚಿತ್ರಗಳು ತಮ್ಮ ಜಿಲ್ಲೆಯ ಮಹತ್ವ, ಕಲೆ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸಲಿವೆ. ಈ ಬಾರಿ 58 ಟ್ಯಾಬ್ಲ್ಯೂಗಳು ಮೆರವಣಿಗೆಯಲ್ಲಿ ಸಾಗಲಿದ್ದು, ಈಗಾಗಲೇ ಅರಮನೆ ಆವರಣಕ್ಕೆ ಪ್ರವೇಶಿಸಿವೆ.

31 ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ವೈಶಿಷ್ಟ್ಯ , ಆಚಾರ ವಿಚಾರ, ಭೌಗೋಳಿಕ ಹಿನ್ನೆಲೆ ಸಾರುವ ಸ್ಥಬ್ಧ ಚಿತ್ರಗಳು ಸಿದ್ಧವಾಗಿವೆ. 28 ರಾಜ್ಯ, ಕೇಂದ್ರ ಇಲಾಖಾವಾರು, ನಿಗಮ ಮಂಡಳಿ ಮತ್ತು ಸರ್ಕಾರದ ಯೋಜನೆಗಳು, ಸಾಧನೆಗಳ ಕುರಿತ ಸ್ತಬ್ಧ ಚಿತ್ರ ಇವಾಗಿವೆ.

ಹೆಚ್‌ಎಎಲ್, ಕೆ.ಎಸ್.ಆರ್.ಟಿಸಿ, ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳ ನಿರ್ಮಾಣ ಮಾಡಲಾಗಿದ್ದು, ಕಾವೇರಿ ನೀರಾವರಿ ನಿಗಮದಿಂದ ಮುಂದಿನ ಜಲ ಸಂಪತ್ತಿನ ಮಹತ್ವ, ಉಪಯೋಗದ ಬಗ್ಗೆ ಸಂದೇಶ. ಸಮಾಜ ಕಲ್ಯಾಣ ಇಲಾಖೆಯಿಂದ ಯೋಜನೆಗಳ ಬಗ್ಗೆ ವಿವರಣೆ ನೀಡಲಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಅಲ್ಲಿನ ಕಲೆ ಸಂಸ್ಕೃತಿ ಬಿಂಬಿಸುವ ಸ್ತಬ್ದಚಿತ್ರಗಳು ವೀಕ್ಷಕರರ ಮನಸೂರೆಗೊಳಿಸಲಿವೆ. ಇನ್ನು ಡೊಳ್ಳುಕುಣಿತ, ವೀರಗಾಸೆ, ಯಕ್ಷಗಾನ, ಕೀಲುಕುದುರೆ ಸೇರಿ ಹಲವು ಕಲಾತಂಡಗಳ ಪ್ರದರ್ಶನ ನಡೆಯುತ್ತಿದೆ.

Key words: Mysore Dasara,  58 tablo, 150 artists ,