Thursday, November 5, 2026

Dasara Wishes

Happy Dasara
Home Front Page ಸರ್ಕಾರಿ ಎಲ್ ಇಡಿ ಜಾಹಿರಾತು ಫಲಕದಲ್ಲಿ ಇನ್ನೂ ಮುಗಿಯದ ಮೈಸೂರು ದಸರಾ ಕಾರ್ಯಕ್ರಮ….!

ಸರ್ಕಾರಿ ಎಲ್ ಇಡಿ ಜಾಹಿರಾತು ಫಲಕದಲ್ಲಿ ಇನ್ನೂ ಮುಗಿಯದ ಮೈಸೂರು ದಸರಾ ಕಾರ್ಯಕ್ರಮ….!

ಮೈಸೂರು,ನ,10,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಮುಗಿದು ತಿಂಗಳು ಕಳೆದಿದೆ. ಆದರೆ ಸರ್ಕಾರಿ ಎಲ್ ಇಡಿ ಜಾಹಿರಾತು ಫಲಕದಲ್ಲಿ ಮಾತ್ರ ದಸರಾ ಕಾರ್ಯಕ್ರಮ ಇನ್ನೂ ಮುಗಿದಿಲ್ಲ.

ಹೌದು, ಮೈಸೂರು ದಸರಾ ಮುಗಿದು ತಿಂಗಳು ಕಳೆದರೂ ಅಧಿಕಾರಿಗಳು ಎಲ್ಇಡಿ ಜಾಹಿರಾತು ಫಲಕದಲ್ಲಿ ದಸರಾ ಕುರಿತ  ಜಾಹಿರಾತು ಬದಲಿಸದೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದಾಗಿ ದಸರಾ ಕಾರ್ಯಕ್ರಮಗಳ ಪಟ್ಟಿಗಳೇ ಇನ್ನು ಪ್ರದರ್ಶನವಾಗೊಳ್ಳುತ್ತಿವೆ. ಎಲ್ಇಡಿ ಜಾಹಿರಾತು ಫಲಕದಲ್ಲಿ ಮೈಸೂರಿಗೆ ಸಂಬಂಧಿಸಿದ ಯೋಜನೆಗಳ ಮಾಹಿತಿ  ನೀಡಬೇಕಾಗಿತ್ತು. ಮತ್ತು ಸ್ವಚ್ಚ ಭಾರತ್ ಹಾಗೂ ಸಂಚಾರಿ ನಿಯಮದ ಬಗ್ಗೆಯೂ ಮಾಹಿತಿ ನೀಡಲಾಗುತ್ತಿತ್ತು.

ಆದರೆ ಇನ್ನು ಎಲ್ ಇಡಿ ಫಲಕದಲ್ಲಿ ದಸರಾ ಕಾರ್ಯಕ್ರಮಗಳದ್ದೇ ಜಾಹೀರಾತು ಪ್ರದರ್ಶನಗೊಳ್ಳುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಜಾಹೀರಾತನ್ನ ಬದಲಿಸಬೇಕಿದೆ.

Key words: Mysore Dasara- – programs –display- Government- LED- Advertisment