ಮೈಸೂರು ದಸರಾ ಮಹೋತ್ಸವ: ಈ ತಿಂಗಳಲ್ಲಿ ಜನಪ್ರತಿನಿಧಿಗಳ ಮೊದಲ ಸಭೆ- ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು,ಆಗಸ್ಟ್,15,2021(www.justkannada.in): ಕೊರೊನಾ ನಡುವೆ ಮೈಸೂರು ದಸರಾ ಮಹೋತ್ಸವ ಆಚರಣೆ ನಡೆಸಬೇಕಿದ್ದು ಈ ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ ಮೈಸೂರು ಜನಪ್ರತಿನಿಧಿಗಳ ಮೊದಲ ಸಭೆ ಕರೆಯುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ಜನಪ್ರತಿನಿಧಿಗಳ ಮೊದಲ ಸಭೆಯಲ್ಲಿ ಯಾವ ರೀತಿಯಾಗಿ ಸರಳ ದಸರ ಮಾಡಬೇಕು ಅನ್ನೋ ಬಗ್ಗೆ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹ ಮಾಡ್ತೀನಿ. ನಂತರ ಸಿಎಂ ಜೊತೆ ಚರ್ಚೆ ಮಾಡಿ ಹೈ ಪವರ್ ಕಮಿಟಿ ಕರೆಯುತ್ತೇವೆ ಎಂದರು.

ಕೋವಿಡ್ ನಿರ್ವಹಣೆ ನಮ್ಮ ಮೊದಲ ಆದ್ಯತೆ. ಮೂರನೇ ಅಲೆಗೆ ಸಿದ್ಧತೆ ಮಾಡಿಕೊಂಡು, ಅದರ ನಡುವೆಯೇ ಸುರಕ್ಷತೆಯಿಂದ ದಸರಾ ಮಾಡಬೇಕಿದೆ‌. ಕಳೆದ ಬಾರಿಯ ಅನುದಾನವನ್ನೇ ಬಳಸಿಕೊಂಡು ದಸರಾ ಆಚರಿಸಲು ಚಿಂತನೆ ನಡೆಸಲಾಗಿದೆ. ಕೋವಿಡ್ ಅಲೆಯ ಏರಿಳಿತ ಗಮನಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಸಚಿವ ಎಸ್. ಟಿ.ಸೋಮಶೇಖರ್  ತಿಳಿಸಿದರು.

Key words: Mysore- Dasara Mahotsav -first meeting-Minister-ST Somashekhar