ಮೈಸೂರು,ಅಕ್ಟೋಬರ್,2,2025 (www.justkannada.in): ಸಾಂಸ್ಕೃತಿನ ನಗರ ಮೈಸೂರಿನದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದ್ದು ಈ ನಡುವೆ ಮೈಸೂರು ಅರಮನೆಯಲ್ಲಿ ಜಟ್ಟಿಕಾಳಗ ಮೈನವಿರೇಳಿಸಿತು.
ಅರಮನೆಯ ಸವಾರಿ ತೊಟ್ಟಿಯಲ್ಲಿ ನಡೆದ ಜಟ್ಟಿ ಕಾಳಗದಲ್ಲಿ ನಾಲ್ವರು ಜಟ್ಟಿಗಳು ಸೆಣಸಾಡಿದರು. ಮಂಜುನಾಥ್ ಬೆಂಗಳೂರಿನ ಪ್ರದ್ಯೂಮ್ನ, ಚಾಮರಾಜನಗರದ ಮಹೇಶ್ ನಾರಾಯಣ ಜಟ್ಟಿ ಚನ್ನಪಟ್ಟಣದ ರಾಘವೇಂದ್ರ ಜಟ್ಟಿ ಕಾಳಗದಲ್ಲಿ ಸೆಣೆಸಾಡಿದರು.
ಜಟ್ಟಿಕಾಳಗವನ್ನ ನೋಡಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕಣ್ತುಂಬಿಕೊಂಡರು. ಮೈಸೂರಿನ ರಾಜಾಶ್ರಯದಲ್ಲಿ ಬೆಳೆದು ಬಂದಿರುವ ಈ ಕಾಳಗ ವಿಜಯ ದಶಮಿಯಂದು ಅದರಲ್ಲೂ ಜಂಬೂ ಸವಾರಿ ಮೆರವಣಿಗೆಗೂ ಮುನ್ನ ನಡೆಯುವ ಸಾಂಪ್ರದಾಯಿಕ ಕ್ರೀಡೆ. ಕಣದಲ್ಲಿ ಜಟ್ಟಿಗಳ ರಕ್ತ ಚೆಲ್ಲಿ ರಾಜಮನೆತನಕ್ಕೆ ಜಟ್ಟಿಗಳು ತಮ್ಮ ನಿಷ್ಠೆ ಪ್ರದರ್ಶಿಸುತ್ತಾರೆ, ಬಳಿಕಷ್ಟೇ ಅರಮನೆಯಿಂದ ಜಂಬೂ ಸವಾರಿ ಹೊರಡುವುದು ಪ್ರತೀತಿ.
Key words: Mysore Dasara, Jatti kalaga, palace