ನಾಡಹಬ್ಬ ಉದ್ಘಾಟಿಸಿದ ಬಾನು ಭಾವುಕ.

ಮೈಸೂರು,ಸೆಪ್ಟಂಬರ್,22,2025 (www.justkannada.in): 2025ರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ತಾಕ್ ಚಾಲನೆ ನೀಡಿದರು. 

ಚಾಮುಂಡೆಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಮೂರ್ತಿಗೆ ವೃಶ್ಚಿಕ‌ ಲಗ್ನದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಸಾಹಿತಿ ಬಾನು ಮುಷ್ತಾಕ್ ಅವರು  ಮೈಸೂರು ದಸರಾಗೆ ಚಾಲನೆ ನೀಡಿದರು. ಸಿಎಂ ಸಿದ್ದರಾಮಯ್ಯಅವರೂ ಸಹ ತಾಯಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು.

ಭಾನು ಮುಷ್ತಾಕ್ ಮಲ್ಲಿಗೆ ಹೂ ಮುಡಿದು ಬಂದಿದ್ದು ಬಾನು ಮುಸ್ತಾಕ್ ಕುಟುಂಬಸ್ಥರು ಸೀರೆಯುಟ್ಟು ಹೂವ ಮುಡಿದು ಟ್ರೆಡಿಷನಲ್ ಲುಕ್ ನಲ್ಲಿ ದಸರಾ ಉದ್ಘಾಟನೆಗೆ ಆಗಮಿಸಿದ್ದಾರೆ

ದೇವಸ್ಥಾನದ ಪ್ರದೇಶದಲ್ಲಿ ಬಾನುಮುಷ್ತಾಕ್ ಅವರು ಗಣೇಶನಿಗೆ ನಮಿಸಿ ಮಂಗಳಾರತಿ ಪಡೆದರು.  ಬಿಜೆಪಿ ನಾಯಕರ ಹೇಳಿಕೆಗೆ ಸೆಡ್ಡು ಹೊಡೆದ ಭಾನು ಮುಸ್ತಾಕ್ ಅವರು ಮಂಗಳಾರತಿ ಪಡೆದರು.

ಮಂಗಳಾರತಿ ತಗೋತಾರ..?  ಕೈಮುಗಿತಾರಾ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು. ಇದೀಗ ಚಾಮುಂಡೇಶ್ವರಿಗೆ ಕೈಮುಗಿದು ಮಂಗಳಾರತಿ ತೆಗೆದುಕೊಂಡು  ಭಾನು ಮುಸ್ತಾಕ್ ಅವರು ಭಾವುಕರಾದರು.

ದಸರಾ ಉದ್ಘಾಟನೆ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಸಚಿವರಾದ ಹೆಚ್.ಕೆ ಪಾಟೀಲ್ ಶಿವರಾಜ್ ತಂಗಡಗಿ, ವೆಂಕಟೇಶ್  ಮತ್ತು ಶಾಸಕರಾದ ತನ್ವೀರ್ ಸೇಠ್, ಜಿ.ಟಿ ದೇವೇಗೌಡ ಸೇರಿ ಶಾಸಕರುಗಳು ಅಧಿಕಾರಿಗಳು ಉಪಸ್ಥಿತರಿದ್ದರು.

Key words: Mysore dasara, inaugurated, Banu Mustak, CM Siddaramaiah