ಮೈಸೂರು ಜಿಲ್ಲೆ: ‘ಮಧ್ಯಂತರ ರಜೆ’ ವೇಳೆ ತರಗತಿಗಳನ್ನ ನಡೆಸುವಂತಿಲ್ಲ

ಮೈಸೂರು,ಸೆಪ್ಟಂಬರ್,20,2025 (www.justkannada.in):  ಸೆಪ್ಟಂಬರ್  22ರಿಂದ ಅಕ್ಟೋಬರ್ 7ರವರೆಗೆ ಮಧ್ಯಂತರ ರಜೆ  ಹಿನ್ನೆಲೆಯಲ್ಲಿ ಈ ವೇಳೆ  ಜಿಲ್ಲೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ಯಾವುದೇ ರೀತಿಯ ತರಗತಿಗಳನ್ನ ನಡಸದಂತೆ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ),  ಮೈಸೂರು ಉಪನಿರ್ದೇಶಕರ ಕಚೇರಿ ಆದೇಶ ಹೊರಡಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ)ಯ ಮೈಸೂರು ಉಪನಿರ್ದೇಶಕರು, 2025-26ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ) ಇಲಾಖೆಯ ಮಾರ್ಗಸೂಚಿ ಅನ್ವಯ, ದಿನಾಂಕ 22-09-2025 ರಿಂದ 07-10-2025ರವರೆಗೂ ಮದ್ಯಂತರ ರಜೆ ಇರುವುದರಿಂದ ಮೈಸೂರು ಜಿಲ್ಲೆಯ ಎಲ್ಲಾ ಸರ್ಕಾರಿ /ಅನುದಾನಿತ/ಅನುದಾನರಹಿತ ಕಾಲೇಜಿನ ಪ್ರಾಚಾರ್ಯರು ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಯಾವುದೇ ರೀತಿಯ ತರಗತಿಗಳು, ವಿಶೇಷ ತರಗತಿಗಳು, ಅಥವಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ತಪ್ಪಿದಲ್ಲಿ ಅಂತಹ ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು  ಎಂದು ತಿಳಿಸಿದ್ದಾರೆ.

Key words: Mysore, PUC, Classes, Dasara Holiday, DDPI