Saturday, September 26, 2026

BDA Apartments

ಮೈಸೂರು ದಸರಾ: ಅರಮನೆಯಲ್ಲಿ ಐತಿಹಾಸಿಕ ಜಟ್ಟಿಕಾಳಗ BDA JK_Adv BDA Adv
Home DASARA2024 ಮೈಸೂರು ದಸರಾ: ಅರಮನೆಯಲ್ಲಿ ಐತಿಹಾಸಿಕ ಜಟ್ಟಿಕಾಳಗ

ಮೈಸೂರು ದಸರಾ: ಅರಮನೆಯಲ್ಲಿ ಐತಿಹಾಸಿಕ ಜಟ್ಟಿಕಾಳಗ

ಮೈಸೂರು, ಅಕ್ಟೋಬರ್,12,2024 (www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಸಕಲ ಸಿದ್ದತೆ ನಡೆಯುತ್ತಿದ್ದು, ಅರಮನೆ ಆವರಣದಲ್ಲಿ ಜಟ್ಟಿ ಕಾಳಗ ನಡೆಯುತ್ತಿದೆ.

ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಐತಿಹಾಸಿಕ ಜಟ್ಟಿಕಾಳಗ ನಡೆಯುತ್ತಿದ್ದು ನಾಲ್ಕು ಮಂದಿ ಜಟ್ಟಿಗಳು ಕಾಳಗದಲ್ಲಿ ಪಾಲ್ಗೊಂಡಿದ್ದಾರೆ. ಮೈಸೂರಿನ ಬಲರಾಮ ಜಟ್ಟಿ ಹಾಗೂ ನಾರಾಯಣ ಜಟ್ಟಿ ನಡುವೆ ಜಟ್ಟಿ ಕಾಳಗ ನಡೆದಿದೆ.

ಐತಿಹಾಸಿಕ ಜಟ್ಟಿ ಕಾಳಗವನ್ನು ರಾಜವಂಶಸ್ಥೆ ಪ್ರಮೋದಾದೇವಿ  ಒಡೆಯರ್ ವೀಕ್ಷಿಸಿದರು. ಪ್ರತಿವರ್ಷವೂ ಜಟ್ಟಿಕಾಳಗ ನಡೆಯಲಿದ್ದು ಜಟ್ಟಿಗಳು ವಜ್ರಮುಷ್ಠಿ ಆಯುಧ ಹಿಡಿದು ಕಾಳಗ ನಡೆಸುತ್ತಾರೆ. ರಕ್ತಚಿಮ್ಮಿದಾಗ ಅದು ದೇವಿಗೆ ಸಮರ್ಪಣೆಯಾಗುತ್ತದೆ.

Key words: Mysore Dasara, Historic jatti kalaga, Palace