ಮೈಸೂರು ದಸರಾ ಮಹೋತ್ಸವ: ಗಜಪಯಣಕ್ಕೆ ಚಾಲನೆ; ಸಚಿವರಿಗಾಗಿ ಗಜಪಡೆಗೆ 2ನೇ ಬಾರಿ ಪೂಜೆ….

ಮೈಸೂರು,ಆ,22,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಗಜಪಯಣಕ್ಕೆ ಚಾಲನೆ ನೀಡಲಾಗಿದ್ದು ಗಜಪಡೆಗಳು ಮೈಸೂರಿನತ್ತ ಹೆಜ್ಜೆ ಹಾಕುತ್ತಿವೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ದಸರಾ ಗಜಪಯಣಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ಮೈಸೂರು ದಸರಾ ಮಹೋತ್ಸವದ ಕಾರ್ಯಗಳು ಆರಂಭವಾಗಿದೆ. ಅಂಬಾರಿ ಆನೆ ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ಮೊದಲ ಹಂತದ 6 ಆನೆಗಳು  ಮೈಸೂರಿನತ್ತ ಹೆಜ್ಜೆ ಹಾಕುತ್ತಿವೆ.

ಇನ್ನು ದಸರಾ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಸಚಿವರಾದ   ಆರ್.ಅಶೋಕ್ ಮತ್ತು ವಿ.ಸೋಮಣ್ಣ ಆಗಮಿಸಿದರು. ಹೀಗಾಗಿ ಸಚಿವರಿಗಾಗಿ ದಸರಾ ಆನೆಗಳಿಗೆ 2ನೇ ಬಾರಿಗೆ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಸಚಿವ ಆರ್, ಅಶೋಕ್ ಮತ್ತು ವಿ.ಸೋಮಣ್ಣ ಅವರಿಗಾಗಿ ಎರಡೆರೆಡು ಬಾರಿ ಪೂಜೆ ಸಲ್ಲಿಸಲಾಯಿತು. ಸಚಿವರಿಬ್ಬರು ಫಲತಾಂಬೂಲ ಕೈಯಲ್ಲಿ ಹಿಡಿದು  ಪೂಜೆ ಸಲ್ಲಿಸಿ ಗಜಪಡೆಗೆ ಪುಷ್ಪಾರ್ಚನೆ ಮಾಡಿದರು.

Key words: mysore dasara-gajapayana-hunsur-veeranahosalli-ministers-R.Ashok-vi.somanna