ಮೈಸೂರು ಆಗಸ್ಟ್, 30,2025 (www.justkannada.in): ದಸರಾ ಚಲನಚಿತ್ರೋತ್ಸವ 2025 ಅಂಗವಾಗಿ ಕಿರು ಚಿತ್ರ ಸ್ಪರ್ಧೆ ಆಯೋಜಿಸಿದ್ದು ಈ ಸಂಬಂಧ 34 ಕಿರುಚಿತ್ರಗಳು ಸಲ್ಲಿಕೆಯಾಗಿ ಸಿನಿಮಾ ತಂತ್ರಜ್ಞರಿಂದ ಕಿರು ಚಿತ್ರಗಳ ವೀಕ್ಷಣೆ ಪ್ರಕ್ರಿಯೆ ನಡೆಯಿತು.
ಈ ಬಾರಿಯ ಕಿರುಚಿತ ಸ್ಪರ್ಧೆಗೆ 34 ಸಿನಿಮಾಗಳು ನೊಂದಣಿಗೊಂಡು ಎಲ್ಲಾ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ರೀತಿಯ ಕಥಾವಸ್ತುವನ್ನು ಹೊಂದಿದೆ. ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ಕೆಗೊಂಡ ಚಿತ್ರಗಳನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗುವುದು.
ಕಿರುಚಿತ್ರ ಸ್ಪರ್ಧೆಯ ಕಿರು ಚಿತ್ರಗಳ ಆಯ್ಕೆಯ ತೀರ್ಪುಗಾರರಾಗಿ ಶಿವಮೊಗ್ಗ ಇಂದಿರಾಗಾಂಧಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ನರೇಂದ್ರ ಕುಳಗಟ್ಟೆ, ಜಯಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಚರಿತ, ಮೈಸೂರು ವಿಶ್ವವಿದ್ಯಾನಿಲಯದ ಇಎಂಆರ್ಸಿ ತಂತ್ರಜ್ಞರಾದ ಗೋಪಿನಾಥ್, ಬೆಂಗಳೂರಿನ ಸೌಂಡ್ ಇಂಜಿನಿಯರ್ ಅನಿಲ್ ಕುಮಾರ್ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ದಸರಾ ಚಲನಚಿತ್ರೋತ್ಸವದ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಹಾಗೂ ಹುಣಸೂರು ಉಪ ವಿಭಾಗಾಧಿಕಾರಿಗಳಾದ ವಿಜಯಕುಮಾರ್,
ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಕೆ.ಆರ್.ಐ.ಡಿ.ಎಲ್ ಕಾರ್ಯಪಾಲಕ ಅಭಿಯಂತರಾದ ಶೋಭಾ.ಕೆ ಹಾಗೂ ಸಮಿತಿಯ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ.ಹರೀಶ್ ಹಾಗೂ ಚಲನಚಿತ್ರೋತ್ಸವ ಸಹ ಸಯೋಜಕರಾದ ಶ್ರೇಯಸ್ ಉಪಸ್ಥಿತರಿದ್ದರು.
ಆಯ್ಕೆಗೊಂಡ ಕಿರುಚಿತ್ರಗಳು
- ಹಿಂಬಾಲಿಸಿ
2.ಆ ಕ್ಷಣ
3.ಅದೃಷ್ಟ ಲಕ್ಷ್ಮೀ
- ಮಾರ್ವೆನ್
5.ನನ್ನ ಪ್ರಪಂಚ
6.ಹಬ್ಬದ ಹಸಿವು
7.ಕಾಲಾಂತರ
8.ಎರ್ಡ್ರೂಪಾಯಿ
9.ಲಕುಮಿ
10.ಸೆಕ್ಸ್ ಟಾಯ್
Key words: Mysore Dasara, Film Festival 2025, Short Films