ಮೈಸೂರು,ಸೆಪ್ಟಂಬರ್,19,2025 (www.justkannada.in): ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ನಲ್ಲಿ ದಸರಾ ಬೊಂಬೆ ಹಬ್ಬವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಆರ್ ರಘು ಅವರು ನಾಡಅಧಿದೇವತೆ ಚಾಮುಂಡೇಶ್ವರಿಯನ್ನು ಪೂಜಿಸುವ ಮೂಲಕ ಆರಂಭಿಸಲಾಗುವ ನವರಾತ್ರಿಯ ಪ್ರತಿಯೊಂದು ದಿನವೂ ಮಹತ್ವದ ಸಂದೇಶ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಈ ಸಂದರ್ಭದಲ್ಲಿ ಬೊಂಬೆ ಸಂಗ್ರಹಿಸಿ ಇಡಲಾಗುವ ಪದ್ಧತಿ ಮೈಸೂರು ಭಾಗದ ಕುಟುಂಬ ವ್ಯವಸ್ಥೆಯಲ್ಲಿ ನಿರಂತರ ಸಹಬಾಳ್ವೆಯ ಹಾಗೂ ಚಾರಿತ್ರಿಕ ಹಿರಿಮೆ ಸಾರುವ ಒಂದು ಪದ್ಧತಿಯಾಗಿ ಬೆಳೆದು ಬಂದಿದ್ದು, ಕೂಡು ಕುಟುಂಬದ ಮಹತ್ವ ಮತ್ತು ಕುಟುಂಬಗಳು ಪರಸ್ಪರ ಬೆರೆಯುವ ಸಂದರ್ಭವನ್ನು ದಸರಾ ಬೊಂಬೆ ಹಬ್ಬ ಪ್ರತಿನಿಧಿಸುತ್ತದೆ. ಕಳೆದು ಹೋಗುತ್ತಿರುವ ಪರಂಪರೆಯನ್ನು ಉಳಿಸಲು ನಾಡಹಬ್ಬ ದಸರೆ ಸಂದರ್ಭದಲ್ಲಿ ಶಾಲೆಗಳಲ್ಲಿಯೇ ಗೊಂಬೆ ಕೂರಿಸುವ ಪದ್ಧತಿ ಮಕ್ಕಳಲ್ಲಿ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ತಿಳಿಸಿಕೊಡುವ ಮೂಲಕ ನಮ್ಮ ದೇಶೀಯ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ನೈಪುಣ್ಯ ಶಾಲೆಯು ಆರಂಭಿಸಿರುವ ಗೊಂಬೆ ಕೂರಿಸುವ ಪದ್ಧತಿಯು ನಿಜಕ್ಕೂ ಅರ್ಥಪೂರ್ಣ ಎಂದು ಹೇಳಿದರು.
ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ನ ಚಿಣ್ಣರ ವಿಭಾಗದ ಮಕ್ಕಳು, ಹಾಗೂ ಶಿಕ್ಷಕರು ಜೊತೆಗೂಡಿ ದಸರಾ ಗೊಂಬೆ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ವಿವಿಧ ನಮೂನೆಗಳ ಹಲವು ಸಂದೇಶಗಳ ಪ್ರತಿನಿಧಿಸುವ ಗೊಂಬೆಗಳು ಸೇರಿದಂತೆ ರಾಮಾಯಣ, ಮಹಾಭಾರತ ಮತ್ತು ಮೈಸೂರು ರಾಜ ಮನೆತನದ ಪರಂಪರೆಯನ್ನು ಪ್ರತಿನಿಧಿಸುವ ಗೊಂಬೆಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಡಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಮಹೇಂದ್ರ ಎಂ. ಎನ್., ಉಪ ಪ್ರಾಂಶುಪಾಲರಾದ ಶೀನಾ ಗುರ್ನಾನಿ, ಪೂರ್ವಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಇಂದಿರಾ ಕೆ. ಹಾಗೂ ಶಿಕ್ಷಕ ವರ್ಗದವರು ಅವರು ಉಪಸ್ಥಿತರಿದ್ದರು.
Key words: Mysore Dasara, doll festival ,Nypunya school







