ಅರಮನೆ ಆವರಣದಲ್ಲಿ ರಂಪಾಟ ಮಾಡಿದ ಆನೆ ನಿಯಂತ್ರಿಸಲು ಮಾವುತರು, ಕಾವಾಡಿಗರ ಹರಸಾಹಸ.

ಮೈಸೂರು,ಸೆಪ್ಟಂಬರ್,20,2021(www.justkannada.in): ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ತಾಲೀಮು ಆರಂಭವಾಗಿದೆ.

ಈ ಮಧ್ಯೆ  ಅರಮನೆಗೆ ಸೇರಿದ ಹೆಣ್ಣಾನೆ ಜಮಿನಿ ಚೈನ್ ಕಿತ್ತುಕೊಂಡು ಫುಲ್ ರ್ಯಾಶ್  ಆದ ಘಟನೆ ನಡೆದಿದೆ. ಜಮಿನಿ ಆನೆ ಅರಮನೆ ಆವರಣದಲ್ಲಿ ರಂಪಾಟ ನಡೆಸಿದ್ದು, ಜಮಿನಿ ಆನೆ ರಂಪಾಟದಿಂದ‌ ಅರಮನೆ ಆವರಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಈ ವೇಳೆಯಲ್ಲಿ ಜಮಿನಿ ನಿಯಂತ್ರಿಸಲು ಮಾವುತರು, ಕಾವಾಡಿಗರು ಹರಸಾಹಸಪಟ್ಟರು. ಕೊನೆಗೆ ಕ್ಯಾಪ್ಟನ್ ಅಭಿಮನ್ಯು, ಧನಂಜಯ ಆನೆಗಳ ಮೂಲಕ ಜಮಿನಿ ಆನೆಯನ್ನ ನಿಯಂತ್ರಣ ಮಾಡಲಾಯಿತು.

Key words: mysore-dasara-control – elephant -roamed -palace