ಮೈಸೂರು ದಸರಾ: ಇಂದು ಸಂಜೆ ಹಲವು ನಿರ್ಧಾರ ಪ್ರಕಟ: ರಾಜಮನೆತನಕ್ಕೆ ಗೌರವ ಧನ ಕುರಿತು ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ದು ಹೀಗೆ…

ಮೈಸೂರು,ಸೆಪ್ಟಂಬರ್,18,2020(www.justkannada.in):  ಮೈಸೂರು ದಸರಾ ಆಚರಣೆ ಕುರಿತು ಇಂದು ಸಂಜೆ 5 ಗಂಟೆಗೆ ಸಭೆ ನಡೆಸಿ ಹಲವು ನಿರ್ಧಾರ ಪ್ರಕಟಿಸುತ್ತೇವೆ. ಈ ಬಾರಿ ಸರಳ ದಸರಾವಾದ್ರೂ ರಾಜಮನೆತನಕ್ಕೆ ಗೌರವ ಧನ ನೀಡುತ್ತೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ದಸರಾ ಉದ್ಘಾಟಕರ ಹೆಸರು ಇನ್ನು ಅಂತಿಮ ಆಗಿಲ್ಲ. ಇಂದು ಸಂಜೆ ಸಭೆ ಬಳಿಕ ಎಲ್ಲವನ್ನು ಮಾಹಿತಿ‌ ನೀಡುತ್ತೇವೆ. ಉದ್ಘಾಟಕರ ಆಯ್ಕೆ  ಬಗ್ಗೆ ಅಯಾ ಇಲಾಖೆಗಳಿಗೆ ಸೂಚಿಸಲಾಗಿದೆ. ಅವರು ಆಯ್ಕೆ ಮಾಡಿ ಪಟ್ಟಿ ನೀಡುತ್ತಾರೆ‌. ಆ ಪಟ್ಟಿಯನ್ನ ಮುಖ್ಯಮಂತ್ರಿ ಜೊತೆ ಚರ್ಚೆ ‌ಮಾಡಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ‌ ಎಂದು ತಿಳಿಸಿದರು.

ಸರಳ ದಸರಾಗೆ 10ಕೋಟಿಯ ಅಗತ್ಯತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಹತ್ತು ದಿನದ ಕಾರ್ಯಕ್ರಮಕ್ಕೆ ಅನುದಾನದ ಅಗತ್ಯವಿದೆ. ಯಾವುದೇ ಸಂಪ್ರದಾಯಕ ದಸರಾ ಕಾರ್ಯಕ್ರಮವನ್ನ ಕೈಬಿಡಲ್ಲ. ರಾಜಮನೆತನದವರಿಗೆ ಸರ್ಕಾರದಿಂದ ಏನು ಕೊಡಬೇಕು ಅದನ್ನ ಕೊಡುತ್ತೇವೆ. ಅದರಲ್ಲಿ ಯಾವುದೇ ಬದಲಾವಣೆ ಇರೋದಿಲ್ಲ. ಹಿಂದೆ ಯಾವ ರೀತಿ ಅವರಿಗೆ ಗೌರವ ಕೊಡಲಾಗುತ್ತಿತ್ತು, ಅದು ಮುಂದುವರೆಯಲಿದೆ. ಸದ್ಯದಲ್ಲೇ ಅವರನ್ನ ಅಧಿಕೃತವಾಗಿ ಭೇಟಿ ಮಾಡಿ ಆಹ್ವಾನ ನೀಡಲಾಗುತ್ತದೆ ಎಂದು ತಿಳಿಸಿದರು.mysore-dasara-announces-many-decisions-minister-st-somashekhar

ದಸರಾ ಸಂಬಂಧ ಈಗಾಗಲೇ ಸಿದ್ದತೆಗಳು ನಡೆಯುತ್ತಿವೆ. ಇಂದು ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಸಭೆಯಲ್ಲಿ ಈ ಎಲ್ಲಾ ವಿಚಾರಗಳನ್ನ ಚರ್ಚೆ ಮಾಡುತ್ತೇನೆ ಎಂದರು.

Key words: Mysore Dasara -announces -many decisions -Minister -ST Somashekhar