ಮೈಸೂರು ದಸರಾ: ಬನ್ನಿಮಂಟಪದಲ್ಲಿ ಏರ್ ಶೋ, ಡ್ರೋನ್ ಶೋ

ಮೈಸೂರು,ಸೆಪ್ಟಂಬರ್,17,2025 (www.justkannada.in): ವಿಶ್ವ ವಿಖ್ಯಾತ  ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಬನ್ನಿಮಂಟಪ ಮೈದಾನದಲ್ಲಿ ಏರ್ ಶೋ, ಡ್ರೋನ್ ಶೋ ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ.

ಮೈಸೂರು ದಸರಾ-2025 ರ ಪ್ರಯುಕ್ತ ಬನ್ನಿಮಂಟಪ ಮೈದಾನದಲ್ಲಿ  ನಡೆಯುವ ಕಾರ್ಯಕ್ರಮಗಳ ಪಟ್ಟಿ ಹೀಗಿದೆ..

ಸೆಪ್ಟಂಬರ್ 27 ರಂದು ಸಂಜೆ 4 ಗಂಟೆಗೆ ವೈಮಾನಿಕ ಪ್ರದರ್ಶನ ಸೆಪ್ಟಂಬರ್ 28 ಮತ್ತು 29 ರಂದು ಸಂಜೆ 6 ಗಂಟೆಗೆ ಡ್ರೋನ್  ಶೋ, ಅಕ್ಟೋಬರ್ 1 ರಂದು ಸಂಜೆ 4 ಗಂಟೆಗೆ ವೈಮಾನಿಕ ಪ್ರದರ್ಶನ ಮತ್ತು ಪಂಜಿನ ಕವಾಯತಿನ ಪೂರ್ವಾಭ್ಯಾಸ ಕಾರ್ಯಕ್ರಮ, ಅಕ್ಟೋಬರ್ 2 ರಂದು ಸಂಜೆ 6 ಗಂಟೆಗೆ ಪಂಜಿನ ಕವಾಯಿತು ಕಾರ್ಯಕ್ರಮ ನಡೆಯಲಿದೆ.

ಬನ್ನಿಮಂಟಪ ಮೈದಾನದಲ್ಲಿನ ಆಸೀನಗಳ ವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯಕ್ರಮದ ವೀಕ್ಷಣೆಗೆ, ವೀಕ್ಷಕರಿಗೆ ಅನುವಾಗುವಂತೆ ಆಯಾ ದಿನಗಳಿಗೆ ಸೀಮಿತವಾಗಿ ಪಾಸ್‌ ಗಳನ್ನು ವಿತರಿಸಲಾಗುವುದು. ಬನ್ನಿಮಂಟಪದಲ್ಲಿ ನಡೆಯುವ ಕಾರ್ಯಕ್ರಮದ ಒಳಾಂಗಣ ಪ್ರಾಂಗಣಕ್ಕೆ ಪಾಸ್‌ ಗಳನ್ನು ಹೊಂದಿದವರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಬನ್ನಿಮಂಟಪ ಮೈದಾನದ ಮಿತ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಪಾಸ್ ಇಲ್ಲದವರಿಗೆ ಪ್ರವೇಶವನ್ನು ನಿರ್ಬಂಧಿಸಿದೆ ಎಂದು ದಸರಾ ವಿಶೇಷಾಧಿಕಾರಿ ಹಾಗೂ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.

Key words: Mysore Dasara, Air Show, Drone Show, Bannimantapa