ಮೈಸೂರು ದಸರಾ: ಟಿಕೆಟ್, ಗೋಲ್ಡ್ ಕಾರ್ಡ್  ಬಿಡುಗಡೆ

ಮೈಸೂರು,ಸೆಪ್ಟಂಬರ್,6,2025 (www.justkannada.in): 2025 ನೇ ಸಾಲಿನ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ  ಸೆಪ್ಟಂಬರ್ 22 ರಿಂದ  ಅಕ್ಟೋಬರ್ 2ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು ಇದೀಗ ಮೈಸೂರು ಜಿಲ್ಲಾಡಳಿತ  ದಸರಾ ಟಿಕೆಟ್, ಗೋಲ್ಡ್ ಕಾರ್ಡ್  ಬಿಡುಗಡೆ ಮಾಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು , ನಾಡಹಬ್ಬ ಮೈಸೂರು ದಸರಾ ಪ್ರಮುಖ ಆಕರ್ಷಣೆಯಾದ ಜಂಬೂವಾರಿ, ಪಂಜಿನ ಕವಾಯತು ಕಾರ್ಯಕ್ರಮಗಳ ವೀಕ್ಷಣೆಗೆ ಟಿಕೆಟ್ ಹಾಗೂ ಗೋಲ್ಡ್ ಕಾರ್ಡುಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಟಿಕೆಟ್ ಮತ್ತು ಗೋಲ್ಡ್ ಕಾರ್ಡುಗಳನ್ನು ಮಾರಾಟಕ್ಕೆ ಬಿಡುಗಡೆಗೊಳಿಸಲಾಗಿರುತ್ತದೆ.

ಸಾರ್ವಜನಿಕರಿಗೆ ದಸರಾ ಗೋಡ್ ಕಾರ್ಡ್ ಮತ್ತು ಟಿಕೆಟ್‌ಗಳು ದಿನಾಂಕ: 06.09.2025 ರ ಅಪರಾಹ್ನ 3-00 ಗಂಟೆಯಿಂದ ನಾಡಹಬ್ಬ ಮೈಸೂರು ದಸರಾ ಅಧಿಕೃತ  ಜಾಲತಾಣ https://mysoredasara.gov.in/ ರಲ್ಲಿ ಖರೀದಿಗೆ ಲಭ್ಯವಿರುತ್ತದೆ. ಸಾರ್ವಜನಿಕರು ಆನ್ ಲೈನ್  ಮೂಲಕ ಖರೀದಿಸಬಹುದಾಗಿರುತ್ತದೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Key words: Mysore Dasara, Ticket, Gold Card,  Released