ಮೈಸೂರು ದಸರಾ2025: ಜನಪ್ರಿಯ ಆಹಾರ ಮೇಳಕ್ಕೆ ಅರ್ಜಿ ಆಹ್ವಾನ

ಮೈಸೂರು,ಆಗಸ್ಟ್, 25,2025 (www.justkannada.in): ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ರ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು” ಜನಪ್ರಿಯ ಆಹಾರ ಮೇಳವನ್ನು” ಸೆಪ್ಟೆಂಬರ್ 22 ರಿಂದ ಆಕ್ಟೋಬರ್ 02 ವರೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನ/ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಆಹಾರ ಮೇಳಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಆಹಾರ ಮೇಳದಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಹೊರ ರಾಜ್ಯದ ಆಹಾರ ಪದ್ಧತಿಯಡಿಯಲ್ಲಿ ಕಾಶ್ಮೀರಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತ ಆಹಾರ ಪದ್ಧತಿ, ಆಂಧ್ರ ಶೈಲಿ, ಕೇರಳ ಶೈಲಿ, ತಮಿಳುನಾಡು ಶೈಲಿ, ಮರಾಠಿ ಶೈಲಿಯಲ್ಲಿನ ಸಸ್ಯಾಹಾರಿ ಮತ್ತು ಶಾಖಾಹಾರಿ ಆಹಾರ ಪದ್ಧತಿ ಶೈಲಿಯ ಜೊತೆಗೆ ಅಂತರ್ ರಾಷ್ಟ್ರೀಯ ಚೈನೀಸ್, ಟಿಬೆಟಿಯನ್, ಇಟಾಲಿಯನ್, ಫ್ರೆಂಚ್ ಹಾಗೂ ಆಫ್ರಿಕನ್ ಆಹಾರ ಪದ್ಧತಿಯಡಿಯಲ್ಲಿ ಆಹಾರ ತಯಾರಿಸುವ ಅಡುಗೆಗಳು ಮತ್ತು ಸಿರಿಧಾನ್ಯ ಮತ್ತು ಸಹಜ ಹಾಗೂ ಸಾವಯವ ಧಾನ್ಯಗಳು ಮತ್ತು ತರಕಾರಿಗಳಲ್ಲಿ ಅಡುಗೆಗಳನ್ನು ಮಾಡುವ ವ್ಯಕ್ತಿಗಳು, ಗೃಹಿಣಿಯರು, ಹೋಟೇಲ್ಗಳು, ಸಂಘ ಸಂಸ್ಥೆಗಳು, ರೆಸ್ಟೋರೆಂಟ್ಗಳು ಮತ್ತು ಇತರರು ಭಾಗವಹಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಆಗಸ್ಟ್ 25 ರಿಂದ ಸೆಪ್ಟೆಂಬರ್ 09 ರವರೆಗೆ ನಗರಸಭಾ ಕಾರ್ಯಾಲಯ ಎಸ್.ಆರ್.ಎಸ್. ಎದುರು, ಹೈಟೆನ್ಷನ್ ಜೋಡಿರಸ್ತೆ, ಹೂಟಗಳ್ಳಿ, ಮೈಸೂರು ಇಲ್ಲಿ ನೀಡಲಾಗುವುದು. ಸೆಪ್ಟೆಂಬರ್ 09 ರಂದು ಪಡೆದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮಂಟೇಸ್ವಾಮಿ, ಉಪ ವಿಶೇಷಾಧಿಕಾರಿಗಳು. ಆಹಾರ ಮೇಳ ಉಪಸಮಿತಿ ಹಾಗೂ ಜಂಟಿ ನಿರ್ದೇಶಕರು, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ, ಮೈಸೂರು..ಬಿ.ಎನ್.ಚಂದ್ರಶೇಖರ್ ಕಾರ್ಯಾಧ್ಯಕ್ಷರು ಆಹಾರ ಮೇಳ ಉಪಸಮಿತಿ ಹಾಗೂ ಪೌರಾಯುಕ್ತರು ನಗರಸಭೆ ಹೂಟಗಳ್ಳಿ ಮತ್ತು ಮಹೇಶ್, ಕಾರ್ಯದರ್ಶಿಗಳು. ಆಹಾರ ಮೇಳ ಉಪಸಮಿತಿ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮೈಸೂರು, ಜಮುನಾ.ಡಿ. ಕಛೇರಿ ವ್ಯವಸ್ಥಾಪಕರು, ಹೂಟಗಳ್ಳಿ ನಗರಸಭೆ ದೂ.ಸಂ: 9844464011, ಪ್ರಕಾಶ್ ದೂ.ಸಂ: 9964328792, ನಾಗೇಂದ್ರ ದೂ.ಸಂ: 8310846464 ನ್ನು ಸಂಪರ್ಕಿಸಬಹುದಾಗಿದೆ ಎಂದು ಹೂಟಗಳ್ಳಿ ನಗರಸಭೆ, ಪೌರಾಯುಕ್ತರು ಹಾಗೂ ದಸರಾ ಮಹೋತ್ಸವ-2025ರ ಆಹಾರ ಮೇಳ ಉಪಸಮಿತಿಯ ಕಾರ್ಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Mysore Dasara 2025,  Applications, invited, food fair