ಬರೀ ಮೈಸೂರಿಗೆ “WORLD FAMOUS” ಆಯ್ತಾ ನಮ್‌ ದಸರಾ..?

The world-famous Mysore Dasara festival is world-famous only because of its name. Foreigners and those from outside the state are not getting any updates about Mysore Dasara. It has been a month since the high-level meeting on Dasara was held under the leadership of Chief Minister Siddaramaiah. The name of writer and Booker Prize winner Banu Mushtaq has been announced as the inaugurator. Apart from these facts, no details of any programs for Dasara-2025 are available.

vtu

ಮೈಸೂರು, ಆ.೨೯,೨೦೨೫:  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹೆಸರಿಗಷ್ಟೆ ವಿಶ್ವವಿಖ್ಯಾತವಾಗಿದೆ. ವಿದೇಶಿಗರಿಗಿರಲಿ ಹೊರ ರಾಜ್ಯದವರಿಗೆ ಮೈಸೂರು ದಸರಾ ಬಗ್ಗೆ ಯಾವುದೇ ಅಪ್ಡೇಟ್ಸ್‌ ಲಭಿಸುತ್ತಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆದು ತಿಂಗಳಾಗಿದೆ. ಉದ್ಘಾಟಕರಾಗಿ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಹೆಸರು ಘೋಷಣೆಯಾಗಿದೆ. ಈ ಸಂಗತಿಗಳನ್ನು ಹೊರತು ಪಡಿಸಿ ದಸರಾ-೨೦೨೫ ರ ಯಾವುದೇ ಕಾರ್ಯಕ್ರಮಗಳ ವಿವರ ಲಭ್ಯವಿಲ್ಲ.

ಮುಡಾ ಸೈಟ್‌ ಗಷ್ಟೆ ಬೆಲೆ: ದಸರಾ ಸೈಟ್‌ ಹೇಳೋರೊ ಕೇಳೋರು ಯಾರು ಇಲ್ಲ..?

ಮೈಸೂರು ದಸರಾ ಮಹೋತ್ಸವದ ಇಂಚಿಂಚು ಮಾಹಿತಿಯನ್ನು ಒದಗಿಸಬೇಕಾಗಿದ್ದ ದಸರಾ ವೆಬ್‌ ಸೈಟ್‌ ಈತನಕ ಸಿದ್ಧಗೊಂಡಿಲ್ಲ. ಯಾರಾದರು ಕುತೂಹಲದಿಂದ ಈ ಸೈಟ್‌ ಗೆ ಭೇಟಿ ನೀಡಿದರೆ ನಿರಾಸೆ ಖಂಡಿತ.

ಕಾರಣ ಈ ವೆಬ್‌ ಸೈಟ್‌ ನಲ್ಲಿ ಯಾವುದೇ ಮಾಹಿತಿ ಇಲ್ಲ. ಅಸಲಿಗೆ ಈ ಸೈಟ್‌ ಒಪನ್‌ ಆಗೋದೇ ಇಲ್ಲ. ಅದು ಯೂಸರ್‌ ನೇಮ್‌ ,ಪಾಸವರ್ಡ್‌ ಕೇಳುತ್ತದೆ. ದಸರಾ ಮಹೋತ್ಸವ ವೀಕ್ಷಿಸಲು ಪ್ಲಾನ್‌ ಮಾಡುವ ಉದ್ದೇಶ ಹೊಂದಿರುವ ವಿದೇಶಿಗರಿಗೆ ಇದರಿಂದ ತೀವ್ರ ನಿರಾಸೆಯಾಗಿದೆ.  ಟಿಕೆಟ್‌ ಅದರಲ್ಲೂ “ ಗೋಲ್ಡ್‌ ಕಾರ್ಡ್‌ “  ಪಡೆದು ಕಾರ್ಯಕ್ರಮ ವೀಕ್ಷಿಸುವ ಬಯಕೆ ಹೊಂದಿರುವವರು ವೆಬ್‌ ಸೈಟ್‌ ಸಿದ್ಧವಾಗದ್ದನ್ನು ಕಂಡು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

ಮೈಸೂರಲ್ಲಿ ಏನಾದರು ಬೆಲೆ ಇದ್ರೆ ಅದು ಮುಡಾ ಸೈಟ್‌ ಗಷ್ಟೆ ಹೊರತು ದಸರಾ ವೆಬ್‌ ಸೈಟ್‌ ಗಲ್ಲ ಅನ್ನೋದು ಇದರಿಂದ ಸಾಬೀತಾಗಿದೆ.

ಮಾಹಿತಿ ಕೊರತೆ:

ಈ ಸಾಲಿನ ದಸರಾ ಮಹೋತ್ಸವದ ಕಾರ್ಯಕ್ರಮಗಳೇನು, ಯಾವಯಾವ ಕಲಾವಿದರು ಬರುತ್ತಾರೆ. ಕಾರ್ಯಕ್ರಮಗಳು ಎಲ್ಲಿ ನಡೆಯುತ್ತವೆ. ಅದರ ಸಮಯ ಏನು..? ಈ ಯಾವ ಮಾಹಿತಿಯು ಈ ತನಕ ಲಭ್ಯವಿಲ್ಲ.

ಯುವ ದಸರಾ ಎಲ್ಲಿ..?:

ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಕಳೆದ ವರ್ಷ ಮಹಾರಾಜು ಕಾಲೇಜು ಮೈದಾನದ ಬದಲಿಗೆ ಮೈಸೂರಿನ ಹೊರ ವಲಯದಲ್ಲಿ ಯುವ ದಸರಾ ನಡೆಸಲಾಗಿತ್ತು. ಇಳಯರಾಜ, ರೆಹಮಾನ್ ರಂಥ ಚಲನಚಿತ್ರರಂಗದ  ಘಟಾನುಘಟಿ ಕಲಾವಿದರನ್ನು ಆಹ್ವಾನಿಸಿದ್ದರಿಂದ ನಗರ ಪ್ರದೇಶದಲ್ಲಿ ಜನದಟ್ಟನೆ ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಈ ವರ್ಷ ಎಲ್ಲಿ ಯುವ ದಸರಾ ನಡೆಸುತ್ತಾರೆ ಎಂಬುದು ಇನ್ನು ತೀರ್ಮಾನವಾಗಿಲ್ಲ. ಕಲಾವಿದರ ಡೇಟ್ಸ್‌ ಪೈನಲ್‌ ಆದ ಬಳಿಕ ಕಾರ್ಯಕ್ರಮ ಸ್ಥಳ ನಿಗಧಿಪಡಿಸುವ ಉದ್ದೇಶ ಹೊಂದಲಾಗಿದೆ.

ಯುವ ದಸರಾದ ಸ್ಥಳ ನಿಗಧಿಯಾಗದ ಹೊರತು ಆಹಾರ ಮೇಳದ ಸ್ಥಳ ನಿಗಧಿ ಅಸಾಧ್ಯ. ಕಳೆದ ವರ್ಷ ಹೊರ ವಲಯದಲ್ಲಿ ಯುವ ದಸರಾ ಆಯೋಜನೆ ಮಾಡಿದ್ದರಿಂದ ಮಹಾರಾಜ ಕಾಲೇಜು ಮೈಧಾನದಲ್ಲಿ ಆಹಾರ ಮೇಳೆ ನಡೆಸಲಾಗಿತ್ತು.

ದಸರಾದ ವೈಭವವನ್ನು ಜಗತ್ತಿನಾದ್ಯಂತ ಟಿವಿ, ಯೂಟ್ಯೂಬ್, ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವೀಕ್ಷಿಸುವ ಕೋಟ್ಯಾಂತರ ಮಂದಿ ಇದ್ದಾರೆ. ಇದರಿಂದಾಗಿ ಜಗತ್ತಿನ ವಿವಿಧ ಭಾಗಗಳಿಂದ ಪ್ರವಾಸಿಗರು ಆಕರ್ಷಿತರಾಗುತ್ತಾರೆ.

ಆದರೆ,  ದಸರಾ ಗಜಪಡೆಯ ತೂಕ ಪರೀಕ್ಷೆ, ತಾಲೀಮು ಹೊರತು ಪಡಿಸಿ ಇತರ ಸಿದ್ಧತೆಗಳಿಗೆ ಪ್ರಚಾರದ ಕೊರತೆ ಎದ್ದು ಕಾಣುವಂತಿದೆ. ಆನೆ ಲದ್ದಿ, ಆನೆ ಸ್ನಾನ, ಆನೆ ತಾಲೀಮು ಇವಷ್ಟೆ ದಸರಾ ಎಂಬಂತಾಗಿದೆ. ಇದನ್ನು ಹೊರತು ಪಡಿಸಿ ಸಾಂಸ್ಕೃತಿಕವಾಗಿ ಗಟ್ಟಿಗೊಳಿಸುವ ಇತಿಹಾಸ ಸಾರುವ ಯಾವ ಪ್ರಯತ್ನಗಳು ನಡೆಯುತ್ತಿಲ್ಲ . ಆದರೂ ಕೋಟಿಗಟ್ಟಲೇ ಹಣ ಮಾತ್ರ ವ್ಯಯಿಸಲಾಗುತ್ತದೆ (ಕಳೆದ ವರ್ಷ ಬರೋಬ್ಬರಿ ೪೦ ಕೋಟಿ ರೂ.) ಎಂದು  ಕನ್ನಡ ಚಳವಳಿಗಾರ ವಾಟಾಳ್‌ ನಾಗರಾಜ್‌ ಅಸಮಧಾನ ವ್ಯಕ್ತಪಡಿಸಿದ್ದರು.

ದಸರಾ ಮಹೋತ್ಸವದ ಅಧಿಕೃತ ವೆಬ್‌ಸೈಟ್ ಸಿದ್ಧವಾಗದಿರುವುದರಿಂದ ಪ್ರವಾಸಿಗರಿಗೆ ಮಾಹಿತಿ ಪಡೆಯಲು ತೊಂದರೆಯಾಗಿದೆ. ಇದು ಸಂಘಟನೆ ಕೊರತೆ ಸೂಚಿಸುತ್ತದೆ.

ಐತಿಹಾಸಿಕ ಮಹತ್ವ:

ಮೈಸೂರು ದಸರಾದ ಇತಿಹಾಸ ಶ್ರೀರಂಗಪಟ್ಟಣದಲ್ಲಿ ವಿಜಯನಗರ ಸಾಮ್ರಾಜ್ಯದ ಪರಂಪರೆಯಂತೆ ಆರಂಭವಾಯಿತು. ಒಡೆಯರ್ ರಾಜವಂಶದ ರಾಜ ಒಡೆಯರ್‌ ಅವರಿಂದ ಈ ಆಚರಣೆಗೆ ಚಾಲನೆ ದೊರೆತಿತ್ತು. ಇದು ಶಕ್ತಿಯ ಆರಾಧನೆ ಮತ್ತು ವೈಭವದ ಸಂಕೇತವಾಗಿ ಬೆಳೆಯಿತು.

ಮೈಸೂರು ದಸರಾದ ವಿಶ್ವವಿಖ್ಯಾತ ಸ್ಥಾನಕ್ಕೆ ಇದರ ಐತಿಹಾಸಿಕ, ಸಾಂಸ್ಕೃತಿಕ, ಮತ್ತು ದೃಶ್ಯಾತ್ಮಕ ವೈಭವವೇ ಕಾರಣ. ಆದ್ದರಿಂದ  2025ರ ಆಚರಣೆಯ ಸಿದ್ಧತೆಯ ಕೊರತೆಯನ್ನು ಸರಿಪಡಿಸಲು ರಾಜ್ಯ ಸರಕಾರ ಶೀಘ್ರ ಕ್ರಮ ಕೈಗೊಂಡು , ಈ ವರ್ಷದ ದಸರಾವೂ ಯಶಸ್ವಿಯಾಗಿ ಜಗತ್ತಿನ ಗಮನ ಸೆಳೆಯುವಂತಾಗಲಿ.

KEY WORDS: Mysore dasara-2025, website, not yet ready, mysuru, dasara, elephants

vtu

SUMMARY:

The world-famous Mysore Dasara festival is world-famous only because of its name. Foreigners and those from outside the state are not getting any updates about Mysore Dasara.

It has been a month since the high-level meeting on Dasara was held under the leadership of Chief Minister Siddaramaiah. The name of writer and Booker Prize winner Banu Mushtaq has been announced as the inaugurator. Apart from these facts, no details of any programs for Dasara-2025 are available.