ಮೈಸೂರು ಅರಮನೆ ಪ್ರವೇಶಕ್ಕೆ ಮುಂದಾದ ವಾಟಾಳ್ ನಾಗರಾಜ್ ಪೊಲೀಸರ ವಶಕ್ಕೆ……

ಮೈಸೂರು,ಅಕ್ಟೋಬರ್,26,2020(www.justkannada.in):  ಕೊರೋನಾದಿಂದಾಗಿ ಈ ಬಾರಿ ಸರಳ ದಸರಾ ಜಂಬೂ ಸವಾರಿ ಮೆರವಣಿಗೆಯನ್ನ ಅರಮನೆಗೆ ಸೀಮಿತಗೊಳಿಸಿರುವ ಹಿನ್ನೆಲೆ, ಅದ್ದೂರಿ ದಸರಾ ಆಚರಣೆಯಾಗಬೇಕೆಂದು ಆಗ್ರಹಿಸಿ ಮೈಸೂರು ಅರಮನೆ ಪ್ರವೇಶಕ್ಕೆ ಮುಂದಾಗಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನ ಪೊಲೀಸರು ವಶಕ್ಕೆ ಪಡೆದರು.mysore-dasara-2020-jamboo-ride-kannada-fighter-vatal-nagaraj-arrest-police

ಅದ್ದೂರಿ ದಸರಾ ಆಚರಣೆಯಾಗಬೇಕೆಂದು ಆಗ್ರಹಿಸಿದ್ದ ವಾಟಾಳ್ ನಾಗರಾಜ್ ಇಲ್ಲವಾದಲ್ಲಿ ತಾವೇ ಸಾರೋಟಿನಲ್ಲಿ ಚಾಮುಂಡಿ ಮೆರವಣಿಗೆ ಮಾಡೋದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಹೀಗಾಗಿ ಮೈಸೂರಿಗೆ ಆಗಮಿಸಿದ್ದ ವಾಟಾಳ್ ನಾಗರಾಜ್  ಸಾರೋಟಿನಲ್ಲಿ ಚಾಮುಂಡೇಶ್ವರಿ ಮೆರವಣಿಗೆ ನಡೆಸಲು ಸಜ್ಜಾಗಿದ್ದರು.

ಈ ನಡುವೆ ಮೈಸೂರಿನ ದೊಡ್ಡ ಗಡಿಯಾರ ರಸ್ತೆಯಲ್ಲಿ ಪೊಲೀಸರು ವಾಟಾಳ್ ನಾಗರಾಜ್ ಅವರನ ಕಾರು ಅಡ್ಡಗಟ್ಟಿ ವಾಟಾಳ್ ನಾಗರಾಜ್ ಅವರನ್ನ ಬಂಧಿಸಿದರು. ಮೆರವಣಿಗೆಗೆ ಅವಕಾಶ ಕೊಟ್ಟಿಲ್ಲ  ಎಂದು ವಾಟಾಳ್ ನಾಗರಾಜ್ ಅವರು ಸಿಎಂ ಬಿಎಸ್ ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದು ಯಡಿಯೂರಪ್ಪ ದಸರಾ. ಅರಮನೆಯಲ್ಲಿ ಮಾತ್ರ ಮೆರವಣಿಗೆ ಮಾಡ್ತಿದ್ದಾರೆ. ಜಂಬೂ ಸವಾರಿ, ಚಾಮುಂಡೇಶ್ವರಿ ದೇವಿಯನ್ನು ಅರಮನೆಯೊಳಗೆ ಬಂಧಿಸಿದ್ದಾರೆ. ಮೈಸೂರಿನ ಪರಂಪರೆ ಗೌರವ ಉಳಿಸಬೇಕು. ಸಾರೋಟು, ಚಾಮುಂಡೇಶ್ವರಿ ಚಿತ್ರ,ಬ್ಯಾಂಡ್ ಸೆಟ್ ಎಲ್ಲಾ ವ್ಯವಸ್ಥೆ ಮಾಡಿದ್ವಿ. ಪೊಲೀಸರು ಅದನ್ನೆಲ್ಲಾ ಬಂಧಿಸಿದ್ದಾರೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.mysore-dasara-2020-jamboo-ride-kannada-fighter-vatal-nagaraj-arrest-police

ದರ್ಪ, ದುರಾಹಂಕಾರ, ದ್ವೇಷ ಬಿಡಿ, ಚಾಡಿ ಮಾತು ಕೇಳಬೇಡಿ….

ಯಡಿಯೂರಪ್ಪ ಜೈಲಿಗೆ ಹೋಗಿ ಬಂದ್ರು ಬುದ್ದಿ ಬಂದಿಲ್ಲ. ದರ್ಪ, ದುರಾಹಂಕಾರ, ದ್ವೇಷ ಬಿಡಿ, ಚಾಡಿ ಮಾತು ಕೇಳಬೇಡಿ. ನೀವೂ ಹಿಟ್ಲರ್ ಅಲ್ಲ, ಹಿಟ್ಲರ್ ಬಗ್ಗೆ ಇತ್ತಿಚೇಗೆ ಒಳ್ಳೆಯ ಮಾತು ಕೇಳಿ ಬಂದಿದೆ. ನಾನು ಪೊಲೀಸ್ ಪರ ನಿಮ್ಮ ತರಹ ಅಲ್ಲ. ಪೊಲೀಸ್ ಬಗ್ಗೆ ಗೌರವ, ಪ್ರೀತಿ ಇದ್ರೆ ಔರದ್ಕರ್ ವರದಿ ಜಾರಿ ಮಾಡಿ. ನೀವೂ ಕೇಳಗಿಳಿದ್ರೆ ಬೀದಿ ನಾಯಿ ಕೂಡ ನಿಮ್ಮನ್ನು ಕೇಳಲ್ಲ ಎಂದು ಹರಿಹಾಯ್ದರು.

Key words: mysore dasara-2020-jamboo-ride-kannada fighter- vatal nagaraj-arrest -police