ಮೈಸೂರು, ನ.04,2024: (www.justkannada.in news) ಯುವತಿಯೊಬ್ಬಳು ನೀಡಿದ ದೂರಿನನ್ವಯ ಇಬ್ಬರು ಯುವಕರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು. ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ.
ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿನ ಹೋಟೆಲ್ ಒಂದರಲ್ಲಿ ಗೆಳೆಯರ ಜತೆ ಶನಿವಾರ ತೆರಳಿದ್ದ ಯುವತಿ. ಇದೀಗ ಪೊಲೀಸ್ ಠಾಣೆ ತೆರಳಿ ಅತ್ಯಾಚಾರ ದೂರು ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು.
ಇಬ್ಬರು ಯುವಕರಿಂದ ಕೃತ್ಯದ ಆರೋಪ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.
ಈ ಸಂಬಂಧ ಜಸ್ಟ್ ಕನ್ನಡ ಜತೆ ಮಾತನಾಡಿದ ಎಸಿಪಿ ಗಜೇಂದ್ರ ಪ್ರಸಾದ್ ಅವರು ಹೇಳಿದಿಷ್ಟು..
ಯುವತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಯುವತಿ ತೆರಳಿದ್ದ ಹೋಟೆಲ್ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಲಾಗಿದ್ದು, ಆರೋಪಿಗಳ ಗುರುತು ಪತ್ತೆ ಹಚ್ಚಲಾಗಿದೆ. ಶೀಘ್ರದಲ್ಲೇ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗುವುದು ಎಂದರು.
key words: MYSORE, CRIME NEWS, two youths, booked, for rape

MYSORE CRIME NEWS: Two youths booked for rape







