ಕಾರ್ಪೊರೇಷನ್ ಕಮಿಷನರ್ ಶಿಲ್ಪನಾಗ್ ರಾಜಿನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್..

ಮೈಸೂರು, ಜೂ.04, 2021 : ನಗರಪಾಲಿಕೆ ಆಯುಕ್ತೆ ಶಿಲ್ಪನಾಗ್ ಅವರ ರಾಜೀನಾಮೆ ಪತ್ರವೇ ನನಗೆ ಬಂದಿಲ್ಲ ಎಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.jk
ಮೈಸೂರಿನಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದಿಷ್ಟು..
ಕಾರ್ಪೊರೇಷನ್ ಕಮಿಷನರ್ ರಾಜೀನಾಮೆ ವಿಷಯದ ಬಗ್ಗೆ ನನಗೇನು ಅಧಿಕೃತ ಮಾಹಿತಿ ಇಲ್ಲ. ಈ ತನಕ ನನಗೆ ಯಾವುದೇ ರಾಜಿನಾಮೆ ಪತ್ರ ಬಂದಿಲ್ಲ. ನಾನು ಕೋವಿಡ್ ನಿಯಂತ್ರಣ ವಿಚಾರವಾಗಿ ಸಭೆ ಮಾಡಲಷ್ಟೆ ಮೈಸೂರಿಗೆ ಬಂದಿದ್ದೇನೆ ಎಂದರು.
ಇದೇ ವೇಳೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರ ಭೇಟಿಗೆಂದು ನಗರ ಪಾಲಿಕೆ ಸದಸ್ಯರು ಆಗಮಿಸಿದ್ದು, ಉಪ ಮೇಯರ್ ಅನ್ವರ್ ಬೇಗ್ ನೇತೃತ್ವದಲ್ಲಿ ಆಡಳಿತ ತರಬೇತಿ ಸಂಸ್ಥೆಗೆ ಆಗಮಿಸಿ ಮುಖ್ಯಕಾರ್ಯದರ್ಶಿ ಭೇಟಿಗೆ ಮುಂದಾಗಿದ್ದಾರೆ. ಪಾಲಿಕೆ ಆಯುಕ್ತರ ರಾಜೀನಾಮೆಯನ್ನು ಅಂಗೀಕರಿಸದಂತೆ ಮನವಿ ಮಾಡಲು ಆಗಮಿಸಿರುವ ಪಾಲಿಕೆ ಸದಸ್ಯರು.
ಪಾಲಿಕೆ ಸದಸ್ಯರಾದ ಅಯುಬ್ ಖಾನ್, ಶಿವಕುಮಾರ್, ಸೌದ್‌ಖಾನ್, ರಮೇಶ್, ಲಕ್ಷ್ಮಿ ಶಿವಣ್ಣ, ಪ್ರೇಮಾ ಶಂಕರೇಗೌಡ ಸೇರಿ ಹಲವರು ಹಾಜರಿದ್ದರು.
key words : mysore-corporation-commissioner-shilpa-nag-chief-secretory-ravikumar