18 ದಿನಗಳ ಬಳಿಕ ಮೈಸೂರಲ್ಲಿ ಕರೋನಾ ಸೆಕೆಂಡ್ ಇನ್ನಿಂಗ್ಸ್ ಆರಂಭ..

 

ಮೈಸೂರು, ಮೇ 18, 2020 : (www.justkannada.in news ) ಕರೋನಾ ಮುಕ್ತವಾಗಿದ್ದ ಮೈಸೂರು ಜಿಲ್ಲೆಯಲ್ಲಿ ಇದೀಗ ಮತ್ತೆ ಕೊರೊನಾ ವೈರಸ್ ನ ಎರಡನೇ ಇನ್ನಿಂಗ್ಸ್ ಆರಂಭ.

ಕೊರೊನಾ ವೈರಸ್ ಮುಕ್ತವಾಗಿದ್ದ ಮೈಸೂರಿಗೆ ಮತ್ತೆ ಬಂದ ಹೆಮ್ಮಾರಿ. ಮೈಸೂರು ಜಿಲ್ಲೆಯ ಕೆ. ಆರ್. ನಗರಕ್ಕೂ ಕಾಲಿಟ್ಟ ಮಹಾಮಾರಿ ಕೊರೊನಾ. ಕೆ. ಆರ್. ನಗರ ತಾಲ್ಲೂಕಿನ ಸಾಲಿಗ್ರಾಮ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢ. ಮುಂಬೈಯಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆ

mysore-corona-positive-confiremed-after-18-days-second-innegs

18 ದಿನಗಳ ನಂತರ ಮೈಸೂರಿನಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ. ಅಂತರ ರಾಜ್ಯದಿಂದ ಬಂದ ವ್ಯಕ್ತಿಗೆ ಕೊರೊನಾ ಪಾಸಿಟಿವ್. ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದ ವ್ಯಕ್ತಿ. 46 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಪತ್ತೆ. ತಣ್ಣಗಾಗುತ್ತಿದ್ದ ಜಿಲ್ಲೆಯಲ್ಲಿ ಮತ್ತೆ ಆತಂಕ. ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ನಿಗಾ ಮುಂದುವರಿಕೆ.

 

key words : mysore-corona-positive-confiremed-after-18-days-second-innegs