ಶಾಸಕ ಜಿ.ಟಿ ದೇವೇಗೌಡರಿಗೆ ವಕ್ಕರಿಸಿದ ಕೊರೋನಾ…

ಮೈಸೂರು,ಆ,5,2020(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ಧರಾಮಯ್ಯ ಕೊರೋನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೆ ಇದೀಗ ಚಾಮುಂಡೇಶ್ವರಿ ಕೇತ್ರದ ಶಾಸಕ ಜಿ.ಟಿ ದೇವೇಗೌಢರಿಗೂ ಕೊರೋನಾ ಪಾಸಿಟಿವ್ ದೃಢವಾಗಿದೆ.mysore-corona-infection-mla-gt-deve-gowda

ಈ ಕುರಿತು ಸ್ವತಃ ಟ್ವಿಟ್ಟರ್ ನಲ್ಲಿ  ಮಾಜಿ ಸಚಿವ ಜಿಟಿ ದೇವೇಗೌಡ ಮಾಹಿತಿ ನೀಡಿದ್ದಾರೆ. ನಾನು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು ಕೋವಿಡ್ ಪಾಸಿಟಿವ್ ಎಂದು ವರದಿ ಬಂದಿದೆ. ರೋಗಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.mysore-corona-infection-mla-gt-deve-gowda

ಹಾಗೆಯೇ ಕಳೆದ 7 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿರುವವರು ಕೋವಿಡ್ ಪರೀಕ್ಷೆಗೆ ಒಳಪಟ್ಟು,ಕೂಡಲೇ ಕ್ವಾರಂಟೈನ್ ಗೆ ಒಳಗಾಗಿ ಮುಂಜಾಗ್ರತೆ ವಹಿಸಿ  ಎಂದು ಶಾಸಕ ಜಿ.ಟಿ ದೇವೇಗೌಡರು ಸಲಹೆ ನೀಡಿದ್ದಾರೆ.

Key words: mysore-Corona – Infection- MLA -GT Deve Gowda