ಟಿ.ನರಸೀಪುರದಲ್ಲಿ ವೈದ್ಯರಿಗೆ ವಕ್ಕರಿಸಿದ ಕೊರೋನಾ: ಆಸ್ಪತ್ರೆಯ ಒಪಿಡಿ ಬಂದ್ ಮಾಡಲು ನಿರ್ಧಾರ…

ಮೈಸೂರು,ಜು,24,2020(www.justkannada.in):  ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು ಕೊರೋನಾ ವಾರಿಯರ್ಸ್ ರನ್ನೂ ಬಿಡದೇ ಮಹಾಮಾರಿ ಕಾಡುತ್ತಿದೆ.jk-logo-justkannada-logo

ಇಂದು ಸಹ ತಿ.ನರಸೀಪುರದಲ್ಲಿ  ಮೂರು ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಟಿ. ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ವೈದ್ಯರಿಗೆ ಕೊರೋನಾ ಮಹಾಮರಿ ವಕ್ಕರಿಸಿದ್ದು ಈ ಹಿನ್ನೆಲೆ ಎರಡು ದಿನಗಳ ಕಾಲ ಓಪಿಡಿ ಬಂದ್ ಮಾಡಲು ಆಸ್ಪತ್ರೆ ಆಡಳಿತ ಮಂಡಳಿ ನಿರ್ಧಾರ ಮಾಡಿದೆ.mysore-corona-doctors-t-narasipura-hospital-opd-bandh

ಇನ್ನು ವೈದ್ಯೆಯ ಸಂಪರ್ಕ ಹೊಂದಿದ್ದ 5 ಜನರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಇದೀಗ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೂ ಆತಂಕ ಶುರುವಾಗಿದೆ. ಬನ್ನೂರು ಪಟ್ಟಣ ಮತ್ತು ಟಿ.ದೊಡ್ಡಪುರ ಗ್ರಾಮದ ಇಬ್ಬರಿಗೆ ಕೊರೋನಾ ಸೋಂಕು ತಗುಲಿದೆ. ಟಿ.ನರಸೀಪುರ ತಾಲ್ಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 83 ಕ್ಕೇರಿದೆ.

Key words: mysore- Corona- doctors – T. Narasipura-hospital -OPD -bandh