ಮೈಸೂರು ಅರಮನೆ ವೇದಿಕೆಯಲ್ಲೂ ಎಂಗೇಜ್’ಮೆಂಟ್ ಮಾಡ್ಕೋಬಹುದಾ…?! ಚಂದನ್ ಶೆಟ್ಟಿ-ನಿವೇದಿತಾ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಟೀಕೆ…

ಮೈಸೂರು,ಅ,5,2019(www.justkannada.in):  ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಯುವ ದಸರಾ ವೇದಿಕೆಯಲ್ಲೇ ರ್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಇದೀಗ ವಿವಾದಕ್ಕೀಡಾಗಿದೆ.

ಯುವದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾ ಎಂಗೇಜ್ಮೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ ಹಾಗೂ ಉಪಸಮಿತಿಯನ್ನ ಕಾಲೆಳೆದಿದ್ದಾರೆ. ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಹೆಸರೇಳಿ ಉಪಸಮಿತಿ ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೀಗೆ ಟೀಕೆ ವ್ಯಕ್ತವಾಗಿವೆ…

‘ನೆರೆ ಪರಿಹಾರಕ್ಕೆ ದುಡ್ಡಿಲ್ಲ ಅಂತಾರೆ ನಿಶ್ಮಿತಾರ್ಥ ಮಾಡೋಕೆ ದುಡ್ಡೆಲ್ಲಿಂದ ಬಂತು? ಎಂದು ಒಬ್ಬರು ಪ್ರಶ್ನಿಸಿದರೇ, ಮತ್ತೊಬ್ಬರು ಸಚಿವ ಸೋಮಣ್ಣರ ಕರಾಮತ್ತು ದಸರಾದಲ್ಲಿ ಎಂಗೇಜ್ಮೆಂಟು ಎಂದು ವ್ಯಂಗ್ಯವಾಡಿದ್ದಾರೆ. ಹಾಗೆಯೇ ಯುವದಸರಾದಲ್ಲಿ ನಿಶ್ಚಿತಾರ್ಥ, ದಸರಾದಲ್ಲಿ ಮದುವೆ ಆಹಾರ ಮೇಳದಲ್ಲಿ ಬೀಗರ ಊಟ ಎಂದು ಮತ್ತೊಬ್ಬರು ಲೇವಡಿ ಮಾಢಿದ್ದಾರೆ.

ಹೀಗೆ ವಿವಿಧ ರೀತಿಯಲ್ಲಿ  ಸ್ಟೇಟಸ್ ಹಾಗೂ ಪೋಸ್ಟ್ ಹಾಕಿ ನೆಟ್ಟಿಗರು  ಟೀಕಿಸಿದ್ದು, ಸರ್ಕಾರ ಹಾಗೂ ಯುವದಸರಾ ಉಪಸಮಿತಿ ಮಾಡಿದ್ದು ಸರೀನಾ ಅಂತ ಪ್ರಶ್ನೆ ಹಾಕಿದ್ದಾರೆ. ಒಟ್ಟಿನಲ್ಲಿ ಈ ಎಂಗೇಜ್ ಮೆಂಟ್ ಸಾಕಷ್ಟು ವಿವಾದಕ್ಕೆ ಗುರಿಯಾಗಿದೆ.

ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾ ವೇದಿಕೆಯಲ್ಲೇ  ಪ್ರೇಕ್ಷಕರ ಸಮ್ಮುಖದಲ್ಲೇ ರ್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ಬಿಗ್ಬಾಸ್ ಹುಡುಗಿ ನಿವೇದಿತಾ ಗೌಡಗೆ ಮಂಡಿಯೂರಿ ತನ್ನ ಪ್ರೇಮ ನಿವೇದನೆ ಹೇಳಿಕೊಂಡಿದ್ದರು. ಅಲ್ಲದೆ ನಿವೇದಿತಾ ಗೌಡಗೆ ರಿಂಗ್ ತೊಡಿಸಿ ಪ್ರಪೊಸ್ ಮಾಡಿದ್ದರು.

ಚಂದನ್ ಶೆಟ್ಟಿ ಪ್ರಪೋಸ್ ಮಾಡುತ್ತಿದ್ದಂತೆ ನಿವೇದಿತಾ ಪ್ರಪೋಸ್ ಒಪ್ಪಿಕೊಂಡು ಚಂದನ್ ಶೆಟ್ಟಿಯನ್ನ ಅಪ್ಪಿಕೊಂಡ ಫುಲ್ ಖುಷ್ ಆಗಿದರು. ಚಂದನ್ ಶೆಟ್ಟಿ ಪ್ರಪೋಸ್ ಗೆ ಪ್ರೇಕ್ಷಕರಿಂದ ಚಪ್ಪಳೆಯ ಸುರಿಮಳೆ ಸುರಿಯಿತು.

Key words: mysore- Controversial -Chandan Shetty- Nivedita Gowda- Engagement