ಮೈಸೂರು,ನವೆಂಬರ್ 26,2025 (www.justkannada.in): ಸಂವಿಧಾನಿಕ ಮೌಲ್ಯಗಳನ್ನು ಕಾಪಾಡುವಲ್ಲಿ ಹಾಗೂ ನ್ಯಾಯಸಮ್ಮತ ಸಮಾಜ ನಿರ್ಮಾಣದಲ್ಲಿ ಕಾನೂನು ವಿದ್ಯಾರ್ಥಿಗಳ ಹೊಣೆಗಾರಿಕೆ ಅಗತ್ಯ ಎಂದು ಮೈಸೂರು ಜಿಲ್ಲಾ ನ್ಯಾಯಾಲಯದ FTSC (POCSO) ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಆನಂದ್ ಪಿ. ತಿಳಿಸಿದರು.
ಪರಿವಾರ್ತನಾ ಲಾ ಶಾಲೆಯಲ್ಲಿ ನಡೆದ ಭಾರತೀಯ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ FTSC (POCSO) ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಆನಂದ್ ಪಿ. ಹೊಗಾಡೆ ಅವರು, ಭಾರತೀಯ ಸಂವಿಧಾನದ ಮಹತ್ವವನ್ನು ವಿವರವಾಗಿ ಪ್ರತಿಪಾದಿಸಿದರು. ಸಂವಿಧಾನದ ಪ್ರಮುಖ ವೈಶಿಷ್ಟ್ಯಗಳು, ನಾಗರಿಕ ಹಕ್ಕುಗಳ ರಕ್ಷಣೆ, ನ್ಯಾಯ-ಸಮಾನತೆಯ ಮೌಲ್ಯಗಳು ಮತ್ತು ಸಂವಿಧಾನದ ಚೇತನಾಶೀಲತೆ ಕುರಿತು ವಿಶ್ಲೇಷಣೆ ಮಂಡಿಸಿದರು. ಭಾರತೀಯ ಸಂವಿಧಾನಕ್ಕೆ ಸಂಬಂಧಿಸಿದ ಇತ್ತೀಚಿನ ಕಾನೂನುಗಳು ಹಾಗೂ ನ್ಯಾಯಾಲಯಗಳಿಂದ ನಿರ್ಣಯಿಸಲ್ಪಟ್ಟ ಹಲವು ಪ್ರಕರಣಗಳನ್ನು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ಖಜಾಂಚಿ ಡಾ. ಕೆ. ಬಿ. ಧನಂಜಯ ಅಧ್ಯಕ್ಷತೆಯನ್ನು ವಹಿಸಿದರು. ಪ್ರೊ. ಕೆ. ಬಿ. ವಾಸುದೇವ (ನಿರ್ದೇಶಕರು), ಪ್ರೊ. ಗೋಕುಲ್ ಎಲ್. (ಪ್ರಾಂಶುಪಾಲರು), ಪ್ರೊ. ಎನ್. ರಾಮು (ಅಕಾಡೆಮಿಕ್ ಡೈರೆಕ್ಟರ್), ಪ್ರೊ. ಸೌಮ್ಯ ರಾಜಶೇಖರ್ (ಪ್ರಾಧ್ಯಾಪಕರು), ಪ್ರೊ. ಮಹಾಲಕ್ಷ್ಮಿ ಕೆ. ಎಸ್. (ಪ್ರಾಧ್ಯಾಪಕರು) ಮತ್ತು ಪ್ರೊ. ರವಿಚಂದ್ರ ಕೆ. ಕೆ. (ಪ್ರಾಧ್ಯಾಪಕರು) ಉಪಸ್ಥಿತರಿದ್ದರು.
Key words: Mysore, Parivartana Law School, Constitution Day Celebration







