ಸಿ.ಟಿ.ರವಿ ಒಬ್ಬ ಯಕಶ್ಚಿತ್ ರಾಜಕಾರಣಿ : ಮೈಸೂರಲ್ಲಿ ಮಾಜಿ ಸಿಎಂ ಸಿದ್ದು-ಗುದ್ದು..!

 

ಮೈಸೂರು, ಅ.20, 2019 : ಸಾವರ್ಕರ್ ಹಿಂದೂ ಮಹಾಸಭಾದಲ್ಲಿದ್ದರು. ಹಿಂದುತ್ವ ಪ್ರತಿಪಾದಕರು ಎಂಬ ಕಾರಣಕ್ಕಾಗಿಯೇ ಬಿಜೆಪಿಯವರು ಅವರಿಗೆ ಭಾರತ ರತ್ನ ಕೊಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಗಾಂಧಿ ಕೊಂದ ಆರೋಪಿಗೆ ಭಾರತ ರತ್ನ ಬೇಡ ಅಂತ ಹೇಳಿದ್ದು‌ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು.

ಮೈಸೂರಿನಲ್ಲಿ ಭಾನುವಾರ ಮಾಧ್ಯಮಗಳ ಜತೆ ಮಾತನಾಡಿದ ಸಿದ್ದರಾಮಯ್ಯ ಹೇಳಿದಿಷ್ಟು…..

ಸಿ.ಟಿ.ರವಿ ಅವರ ಟೀಕೆ ವಿಚಾರ. ಸಿ.ಟಿ.ರವಿ ಒಬ್ಬ ಯಕಶ್ಚಿತ್ ರಾಜಕಾರಣಿ. ನಾನು ಹಿಂದೂಗಳಿಗೆ ಭಾರತ ರತ್ನ ಕೊಡಬೇಡಿ ಎಂದು ಹೇಳಿಲ್ಲ. ನಾನು ಕೂಡು ಒಬ್ಬ ಹಿಂದೂ. ಹಿಂದುತ್ವದ ಮೂಲಕ ಕೋಮಯವಾದ ಬಿತ್ತುವವರಿಗೆ ಬೇಡ. ಹಿಂದೂ ಹೆಸರಿನಲ್ಲಿ ಬೆಂಕಿ ಹಚ್ಚುವವರಿಗೆ ಬೇಡ ಅಂತ ಹೇಳಿದ್ದೇನೆ.

ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತೀರಾ ?
ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ಜನರ ಆಶೀರ್ವಾದ ಇದ್ದರೆ ನೋಡೋಣ. ರಾಜಕಾರಣ ಹೇಗೆ ಬರುತ್ತೆ ಅಂತ ಹೇಳೋಕೆ ಆಗಲ್ಲ. ಅವಕಾಶ ಸಿಕ್ಕರೆ ಮತ್ತೊಮ್ಮೆ ಸಿಎಂ ಆಗುತ್ತೇನೆ, ತಪ್ಪೇನಿದೆ ? ಎಂದರು.

ಜಾತಿಗಣತಿ ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಆಸಕ್ತಿ ಇಲ್ಲ.

ಜಾತಿಗಣತಿ ವರದಿ ಸಿದ್ಧಪಡಿಸಿದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದಕಾಂತರಾಜು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದರು. ಈಗ ಅವರು ಕರ್ತವ್ಯದಲ್ಲಿ ಇಲ್ಲ‌. ಆದರೆ ವರದಿ ಜಾರಿ ಮಾಡಲು ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ.
ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದ ಕಮಿಟ್‌ಮೆಂಟ್ ಇಲ್ಲ.ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್ನರನ್ನು ಹತ್ತಿರಕ್ಕೆ ಸೇರಿಸುವುದಿಲ್ಲ. ದಲಿತರು, ಹಿಂದುಳಿದವರ ಅಭಿವೃದ್ಧಿ ಬೇಕಾಗಿಲ್ಲ. ಸ್ವಾತಂತ್ರ್ಯ ಬಂದ ನಂತರ ಆಯಾ ಜಾತಿಯ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಏನು ಅಂತ ಅರ್ಥ ಮಾಡಿಕೊಳ್ಳಬೇಕಿತ್ತು. ಅದಕ್ಕಾಗಿಯೇ ಜಾತಿಗಣತಿ ಮಾಡಿಸಿದೆ. ಆ ವರದಿಯನ್ನು ಜಾರಿ ಮಾಡುವ ಇಚ್ಛಾಶಕ್ತಿ ಸರ್ಕಾರಕ್ಕೆ ಇಲ್ಲ. ಒಂದು ವೇಳೆ ಜಾತಿಗಣತಿ ವರದಿ ಜಾರಿ ಮಾಡದೇ ಇದ್ದರೆ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ.

——–

key words : mysore-congress-cm-siddaramaiha-c.t.ravi=bjp