Saturday, August 8, 2026

BDA Apartments

Home Front Page ಆ.21ಕ್ಕೆ ಕೆ.ಆರ್ ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಸಿಎಂ ಬಿಎಸ್ ವೈ ಬಾಗಿನ ಅರ್ಪಣೆ…

ಆ.21ಕ್ಕೆ ಕೆ.ಆರ್ ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಸಿಎಂ ಬಿಎಸ್ ವೈ ಬಾಗಿನ ಅರ್ಪಣೆ…

ಮೈಸೂರು,ಆ,15,2020(www.justkannada.in): ರಾಜ್ಯದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಭರ್ತಿಯಾಗಿರುವ ಕೆ‌.ಆರ್‌.ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಆಗಸ್ಟ್ 21 ರಂದು ಸಿಎಂ ಯಡಿಯೂರಪ್ಪ ಬಾಗಿನ ಅರ್ಪಿಸಲಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.mysore-cm-bs-yeddyurappa-bagina-krs-kabini-dam

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಚರಣೆ, ತಲಕಾಡು ಪಂಚಲಿಂಗ ದರ್ಶನದ ಬಗ್ಗೆ ಇದುವರೆಗೂ ಚರ್ಚೆಯಾಗಿಲ್ಲ. ಕೊರೋನಾ ಹಾಗೂ ಪ್ರವಾಹ ಹೆಚ್ಚಾಗಿರುವ ಹಿನ್ನೆಲೆ ಆ ವಿಚಾರ ಪ್ರಸ್ತಾಪವಾಗಿಲ್ಲ. ಆಗಸ್ಟ್ 20 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದರು.mysore-cm-bs-yeddyurappa-bagina-krs-kabini-dam

ಹಾಗೆಯೇ ಮುಖ್ಯಮಂತ್ರಿ ಅವರೇ ಮೈಸೂರಿಗೆ ಬಂದಾಗ ಈ ಬಗ್ಗೆ ತಿಳಿಸಲಿದ್ದಾರೆ. ಅಗಸ್ಟ್ 21 ರಂದು ಬಂದು ಕೆ.ಆರ್ ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಿಸಲಿದ್ದಾರೆ ಎಂದು ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.

Key words: mysore- CM BS Yeddyurappa- Bagina-KRS – Kabini dam