19 ಮನೆ ಕಳ್ಳತನ, 64 ವಾಹನ ಕಳ್ಳತನ ಪ್ರಕರಣ ಭೇದಿಸಿದ ಮೈಸೂರು ನಗರ ಪೊಲೀಸರು.  

ಮೈಸೂರು,ಫೆಬ್ರವರಿ,22,2024(www.justkannada.in): ವಿವಿಧ ಕಳವು ಪ್ರಕರಣಗಳಲ್ಲಿ ಮೈಸೂರು ನಗರ ಪೋಲಿಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು  19 ಮನೆ ಕಳ್ಳತನ ಪ್ರಕರಣ ಮತ್ತು 64 ವಾಹನ ಕಳ್ಳತನ ಪ್ರಕರಣಗಳ ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 15 ಆರೋಪಿಗಳ ಬಂಧಿಸಿದ್ದು,  ಒಟ್ಟು 1,69,71,200 ಮೌಲ್ಯದ 2 ಕೆ.ಜಿ 343 ಗ್ರಾಂ ಚಿನ್ನಾಭರಣ, 1ಕೆ.ಜಿ 357 ಗ್ರಾಂ ಬೆಳ್ಳಿ, 61 ದ್ವಿಚಕ್ರ ವಾಹನ, 2 ಕಾರು ಮತ್ತು 1,70,000 ನಗದು ವಶಕ್ಕೆ ಪಡೆದಿದ್ದಾರೆ.

ನಗರದ ವಿವಿಧ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು.  ಈ ಕುರಿತು ಸುದ್ದಿಗೋಷ್ಠಿ ಮೂಲಕ‌ ಮಾಹಿತಿ ನೀಡಿದ  ಮೈಸೂರು ನಗರ ಪೋಲಿಸ್ ಆಯುಕ್ತ ಬಿ.ರಮೇಶ್ ಬಾನೋತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೋಲಿಸ್ ಸಿಬ್ಬಂದಿಗಳನ್ನ ಪ್ರಶಂಸಿದರು.

Key words: Mysore city -police – 19 house- theft -cases – 64 vehicle- theft- cases