ಪಿಎಫ್‍ಐ, ಎಸ್‍ ಡಿಪಿಐ ಸಂಘಟನೆಗಳ ನಿಷೇಧಕ್ಕೆ ಮೈಸೂರು ನಗರ (ಜಿಲ್ಲಾ) ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಒತ್ತಾಯ

ಮೈಸೂರು,ಆ,12,2020(www.justkannada.in):  ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ ದಾಳಿ ಮಾಡಿದಲ್ಲದೆ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವನ್ನುಂಟು ಮಾಡಿರುವ ಕೃತ್ಯ ಖಂಡನಾರ್ಹ. ಪೊಲೀಸರು,ಮಾಧ್ಯಮದವರ ಮೇಲೆ ಹಲ್ಲೆ ನಡೆಸಿರುವುದನ್ನುಖಂಡಿಸುತ್ತೇನೆ ಎಂದು ಮೈಸೂರು ನಗರ (ಜಿಲ್ಲಾ) ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಹೇಳಿದ್ದಾರೆ.jk-logo-justkannada-logo

ಬೆಂಗಳೂರಿನ ಡಿ.ಜೆ ಹಳ್ಳಿ, ಕೆಜಿ ಹಳ್ಳಿ ವ್ಯಾಪ್ತಿ ಗಲಭೆ ಖಂಡಿಸಿದ ಮೈಸೂರು ನಗರ (ಜಿಲ್ಲಾ) ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಜನರಿಂದ ಆಯ್ಕೆಯಾದ ಚುನಾಯಿತ ಶಾಸಕರೊಬ್ಬರ ಮನೆಗೆ ನುಗ್ಗಿ  ಧ್ವಂಸ  ಮಾಡಿರುವುದು ನಾಚಿಕೆಗೇಡು. ಸಾರ್ವಜನಿಕ ಆಸ್ತಿಪಾಸಿಗಳಿಗೆ ಹಾನಿ ಮಾಡಿದ್ದಾರೆ. ಸಾರ್ವಜನಿಕರ ವಾಹನ,ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಿ ಬೆಂಕಿ ಹಚ್ಚಿರುವ ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಾಜದ ಶಾಂತಿ ಹದಗೆಡಿಸಲು, ಕೋಮುಗಲಭೆಯನ್ನು ಹುಟ್ಟು ಹಾಕುತ್ತಿರುವ ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳ ಕಾರ್ಯಕರ್ತರು ಈ ಘಟನೆಯಲ್ಲಿ ಭಾಗೀಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಎಲ್ಲರನ್ನು ಕೂಡಲೇ ಬಂಧಿಸುವ ಜತೆಗೆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗಲಭೆಕೋರರಿಂದ ಹಲವು ಬಡಾವಣೆಗಳ ಕಿಟಕಿಗಾಜುಗಳು,ವಾಹನಗಳು ಹಾನಿಗೀಡಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪರಿಹಾರ ಕಲ್ಪಿಸಬೇಕು. ಗಲಭೆಕೋರರಿಂದಲೇ ನಷ್ಟವನ್ನು ಭರಿಸುವಂತಹ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ.

ಕೊರೊನಾ ಸಮಸ್ಯೆಯ ನಡುವೆ ಕೆಲಸ ಮಾಡುತ್ತಿರುವ ಮಾಧ್ಯಮದವರು, ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೃತ್ಯವನ್ನು ಸಹಿಸಲಾಗದು. ಈ ವಿಚಾರದಲ್ಲಿ ಯಾರೇ ತಪ್ಪು ಎಸಗಿದ್ದರೂ ಅಂತಹವರನ್ನು ಬಂಧಿಸಿ ಕೋಕಾ ಕಾಯಿದೆಯಡಿ ಮೊಕದ್ದಮೆ ಹೂಡಿ ಜೈಲಿಗಟ್ಟಬೇಕು. ಸಮಾಜದಲ್ಲಿ  ಹಗಲಿರುಳು ಕೆಲಸ ಮಾಡುವ ಪತ್ರಕರ್ತರಿಗೆ ಗಲಭೆಯ ವೇಳೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಲ್ಲಿ ಟಿ.ಎಸ್.ಶ್ರೀವತ್ಸ ಮನವಿ ಮಾಡಿದ್ದಾರೆ.

Key words: Mysore city- (district) BJP president -TS Sreevatsa- demands -ban – PFI – SDPI -organizations.