Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ನಾಳೆ ಮೈಸೂರು ನಗರ ಅಭಿವೃದ್ಧಿ ಕುರಿತು ಸಭೆ

ನಾಳೆ ಮೈಸೂರು ನಗರ ಅಭಿವೃದ್ಧಿ ಕುರಿತು ಸಭೆ

ನಾಳೆ ಮೈಸೂರು ನಗರ ಅಭಿವೃದ್ಧಿ ಕುರಿತು ಸಭೆ puliyogare,ayyangar WhatsApp 11 16 at 12.03.42 PM

ಮೈಸೂರು,ನವೆಂಬರ್,21,2024 (www.justkannada.in): ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಾಳೆ ಮೈಸೂರು ನಗರ ಅಭಿವೃದ್ಧಿ ಕುರಿತು ಸಭೆ ನಡೆಯಲಿದೆ.

ನಾಳೆ (ನವೆಂಬರ್ 23) ಬೆಳಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಶ್ರೇಷ್ಠ ಮತ್ತು ಸುಧಾರಿತ ಮೈಸೂರು ಎಂದು ರೂಪಿಸಲು ಸಭೆ ಏರ್ಪಡಿಸಲಾಗಿದೆ.

ಮೈಸೂರು ನಗರದ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಮೈಸೂರು ನಗರದ ಸಮಗ್ರ ಅಭಿವೃದ್ಧಿ ವಿಷಯದಲ್ಲಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಪರಿಸರ, ವಾಣಿಜ್ಯ, ಕೈಗಾರಿಕೆ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ತರಬಹುದಾದ ಸುಧಾರಣೆಗಳ ಕುರಿತು ಸಲಹೆ, ಅಭಿಪ್ರಾಯ, ಪ್ರಸ್ತಾವನೆಗಳನ್ನು ವ್ಯಕ್ತಪಡಿಸಬಹುದು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Mysore city, development, Meeting, tomorrow