ಮೈಸೂರು ಮಹಾನಗರ ಪಾಲಿಕೆ ಹೆಚ್ಚುವರಿ ಪ್ರಭಾರ ಆಯುಕ್ತರಾಗಿ ಪಿ.ಎಸ್. ಕಾಂತರಾಜ್ ಅಧಿಕಾರ ಸ್ವೀಕಾರ…

ಮೈಸೂರು,ಆ,1,2019(www.justkannada.in):  ಮೈಸೂರು ಮಹಾನಗರ ಪಾಲಿಕೆ ಹೆಚ್ಚುವರಿ ಪ್ರಭಾರ ಆಯುಕ್ತರಾಗಿ ಪಿ.ಎಸ್. ಕಾಂತರಾಜ್ ಅಧಿಕಾರ ಸ್ವೀಕಾರ ಮಾಡಿದರು.

ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ  ಶಿಲ್ಪನಾಗ್ ದೀರ್ಘಾವಧಿ ರಜೆಯಲ್ಲಿದ್ದು ಈ ಹಿನ್ನೆಲೆ ಖಾಲಿ ಇದ್ದ ಹುದ್ದೆಗೆ ಹೆಚ್ಚುವರಿ ಪ್ರಭಾರ ಆಯುಕ್ತರಾಗಿ ಪಿ.ಎಸ್.ಕಾಂತರಾಜ್ ಅಧಿಕಾರ ಸ್ವೀಕಾರ ಮಾಡಿದರು. ಕಾಂತರಾಜು ಸದ್ಯ ಮೈಸೂರು ನಗರಾಭಿವೃದ್ಧಿ ಇಲಾಖೆಯಲ್ಲಿ ಆಯುಕ್ತರಾಗಿದ್ದಾರೆ. ಇದೀಗ ಇಂದು ಮತ್ತೊಂದು ಇಲಾಖೆಯ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಸರ್ಕಾರದ ಆದೇಶದ ಮೇರೆಗೆ ಇಂದು ಸಂಜೆ ಕಾಂತರಾಜ್ ಅಧಿಕಾರ ವಹಿಸಿಕೊಂಡಿದ್ದು,ಅಧಿಕಾರ ಸ್ವೀಕರಿಸುತ್ತಿದ್ದಂತೆ ಪಾಲಿಕೆಯ ಅಧಿಕಾರಿಗಳೋಂದಿಗೆ ಸಭೆ ನಡೆಸಿದರು.  ಇಷ್ಟು ದಿನ ಆಯುಕ್ತರ ರಜೆಯಿಂದ ಕುಂಠಿತಗೊಂಡಿದ್ದ ಕೆಲಸಗಳಿಗೆ ಚುರುಕು ಮುಟ್ಟಿಸುವಂತೆ ಸೂಚನೆ ನೀಡಿದರು. ಹಾಗೆಯೇ ಬಾಕಿ ಉಳಿದ ಕೆಲಸಗಳನ್ನ ಹಾಗೂ ಹಿಂದುಳಿದ ವಾರ್ಡ್ ಗಳ ಬಗ್ಗೆ ಹೆಚ್ಚಿನ ಗಮನ ನೀಡುವಂತೆ  ಅಧಿಕಾರಿಗಳಿಗೆ ಕಾಂತರಾಜ್ ಸೂಚಿಸಿದರು.

Key words: Mysore –city corporation-Additional Commissioner -PS Kantaraj.