Sunday, September 27, 2026

BDA Apartments

ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ… BDA ...
Home Front Page  ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ…

 ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ…

ಮೈಸೂರು,ನವೆಂಬರ್,2,2020(www.justkannada.in): ನಗರದ ಟಿ.ಕೆ ಬಡಾವಣೆಯ ಗಣೇಶ ಭಂಡಾರ್ ಬಳಿ ಇರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವವನ್ನ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆಯವರೆಗೆ  ಹೋಟೆಲ್ ನಲ್ಲಿ  ಆಹಾರೋತ್ಸವ ಆಯೋಜಿಸಲಾಗಿತ್ತು. ಸಾಂಪ್ರದಾಯಿಕ ಕರ್ನಾಟಕ ಆಹಾರ ಪದಾರ್ಥ ತಿಂಡಿ ತಿನಿಸುಗಳನ್ನ ತಯಾರಿಸಿ ಗ್ರಾಹಕರಿಗೆ ಒದಗಿಸುವ ಮೂಲಕ ಚೆಫ್ ದಿ ಕ್ಯೂಸನ್  ಕನ್ನಡಾಭಿಮಾನ ತೋರ್ಪಡಿಸಿತು.mysore-chefs-the-cusin-celebrate-kannada-rajyotsava

ಹಾಗೆಯೇ ಹೋಟೆಲ್ ನ ಮೆನುಕಾರ್ಡ್ ಪೋಸ್ಟರ್ ಕನ್ನಡ ಧ್ವಜದ ಬಣ್ಣದಿಂದಲೇ ಕೂಡಿತ್ತು. ಹೋಟೆಲ್ ನ ಸಿಬ್ಬಂದಿಗಳೆಲ್ಲರೂ ಕನ್ನಡ ಧ್ವಜದ ಬ್ಯಾಡ್ಜ್ ಧರಿಸಿ ಕೆಲಸ ನಿರ್ವಹಿಸುವ ಮೂಲಕ ಕನ್ನಡ ಪ್ರೇಮ ಮೆರೆದರು.mysore-chefs-the-cusin-celebrate-kannada-rajyotsava

ಇನ್ನು ನಿನ್ನೆ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ಅಂಗವಾಗಿ ಸಾಂಪ್ರದಾಯಿಕ ಕರ್ನಾಟಕ ತಿಂಡಿ ತಿನಸುಗಳಾದ ಕೊಟ್ಟೆ ಇಡ್ಲಿ, ಮಂಗಳೂರು ಶೈಲಿಯ ಗೋಲಿ ಬಜ್ಜಿ, ಅಪ್ಪಂ-ಕಡ್ಲೆಗಸಿ ವಿವಿಧ ರೀತಿಯ ರೈಸ್ ಬಾತ್, ಪಿಜ್ಜಾ ದೋಸಾ, ನೀರ್ ದೋಸಾ, ಟೊಮೊಟಾ ದೋಸಾ, ದಾವಣಗೆರೆ ಬೆಣ್ಣೆ ದೋಸೆ, ರಾಗಿ ಮುದ್ದೆ, ಸೊಪ್ಪಿನ ಸಾರು ಊಟ (ಮಧ್ಯಾಹ್ನ), ಮೈಸೂರು ಮಸಾಲಾ ದೋಸಾ, ಅಕ್ಕಿರೊಟ್ಟಿ-ಎಣ್ಣೆಗಾಯಿ, ಟೊಮೊಟೊ ಬಾತ್, ಇಡ್ಲಿ, ರವದೋಸೆ, ತುಪ್ಪದ ದೋಸೆ , ಗೋಧಿ ದೋಸೆ, ಹೆಸರುಕಾಳು ದೋಸೆ, ಬಿಸಿಬೆಳೆ ಬಾತ್, ಹಾಗೂ ಇನ್ನೀತರೆ ತಿನಿಸುಗಳನ್ನ ತಯಾರಿಸಿ ಗ್ರಾಹಕರಿಗೆ ಒದಗಿಸಲಾಗಿತ್ತು.

ಈ ಮಧ್ಯೆ ಹೋಟೆಲ್ ನಲ್ಲಿ ಆಯೋಜಿಸಲಾಗಿರುವ ಆಹಾರೋತ್ಸವವನ್ನು ನವೆಂಬರ್ 10ರವರೆಗೆ ವಿಸ್ತರಿಸುವಂತೆ ಗ್ರಾಹಕರ ಒತ್ತಾಯ ಕೇಳಿಬಂದಿದ್ದು ಈ ಹಿನ್ನೆಲೆ ಆಹಾರೋತ್ಸವವನ್ನ ವಿಸ್ತರಿಸಲಾಗಿದೆ. ಬೆಳಿಗ್ಗೆ 7ರಿಂದ 10 ಗಂಟೆವರೆಗೆ ಆಹಾರೋತ್ಸವದಲ್ಲಿ ರುಚಿಕರವಾದ ತಿಂಡಿ ತಿನಿಸುಗಳು ಊಟ ಲಭ್ಯವಿರಲಿದೆ.

Key words:  Mysore -Chefs the cusin-Celebrate- Kannada Rajyotsava