ವೈಭವಪೂರಿತವಾಗಿ ಜರುಗಿದ ಚಾಮುಂಡಿ ತಾಯಿಯ ರಥೋತ್ಸವ: ಸಹಸ್ರಾರು ಭಕ್ತರು ಭಾಗಿ.

ಮೈಸೂರು,ಅಕ್ಟೋಬರ್,26,2023(www.justkannada.in): ನವರಾತ್ರಿ ಸಂಭ್ರಮದ ಮತ್ತೊಂದು ಭಾಗವಾದ ಚಾಮುಂಡಿ ತಾಯಿಯ ರಥೋತ್ಸವ ವೈಭವ ಪೂರಿತವಾಗಿ ಜರುಗಿತು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

ನಾಡಹಬ್ಬ ದಸರಾ ಮಹೋತ್ಸವ ಮುಗಿದ ಎರಡು ದಿನದ ಬಳಿಕ ನಡೆದ ರಥೋತ್ಸವ ಮಹೋತ್ಸವಕ್ಕೆ ರಾಜವಂಶಸ್ಥ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಬೆಳಗ್ಗೆ 7.55 ರಿಂದ 8. 20 ರ ವೃಶ್ಚಿಕ ಶುಭಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು. ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕೂಡ ರಥೋತ್ಸವದಲ್ಲಿ ಭಾಗಿಯಾಗಿದ್ದರು. ಬಳಿಕ ರಥದ ಬೀದಿಯಲ್ಲಿ ನಿಂತು ರಥೋತ್ಸವ ವೀಕ್ಷಣೆ ಮಾಡಿದರು.  ರಥಕ್ಕೆ ಹಣ್ಣು ಧವನ ಎಸೆದು ಜೈ ಚಾಮುಂಡೇಶ್ವರಿ ಎಂಬ ಜೈಕಾರದೊಂದಿಗೆ ರಥೋತ್ಸವದಲ್ಲಿ ಯಶಸ್ವಿಯಾಗಿ ಸಂಚರಿಸಿತು.

ಇದೇ ವೇಳೆ ರಥೋತ್ಸವದ ಬೀದಿಯಲ್ಲಿ 21 ಕುಶಾಲತೋಪು ಸಿಡಿಸಿ ಪೊಲೀಸ್ ಇಲಾಖೆ ಗೌರವ ಸಲ್ಲಿಸಿತು. ಶಾಸಕ ಜಿ.ಟಿ.ದೇವೇಗೌಡ, ಪತ್ನಿ ಲಲಿತಾ ಜಿ.ಟಿ.ದೇವೇಗೌಡ ಸೇರಿ ಅನೇಕರು ಪಾಲ್ಗೊಂಡಿದ್ದರು.

Key words: mysore- chamundi hills- ratotsava -Festival -devotees