ಮೈಸೂರಿನಲ್ಲಿ ಮತ್ತೆ ಸರಗಳ್ಳರ ಕೈಚಳಕ:  ವೃದ್ಧೆಯ ಸರ ಕಸಿದು ಎಸ್ಕೇಪ್

ಮೈಸೂರು,ಜೂ,13,2020(www.justkannada.in): ಮೈಸೂರಿನಲ್ಲಿ ಮತ್ತೆ ಸರಗಳ್ಳರು ಕೈಚಳಕ ತೋರಿದ್ದು, ವೃದ್ದೆಯ 72 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ನಡೆದಿದೆ.mysore- chain snatching-gold-case

ಮೈಸೂರಿನ ಬಸವೇಶ್ವರ ರಸ್ತೆ 5ನೇ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ.  ಅನ್ನಪೂರ್ಣಮ್ಮ(60) ಸರ ಕಳೆದುಕೊಂಡ ವೃದ್ದೆ. ನಿನ್ನೆ ರಾತ್ರಿ ಪರಿಚಿತರೊಂದಿಗೆ ಮಾತನಾಡುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು  ವೃದ್ದೆ ಅನ್ನಪೂರ್ಣಮ್ಮ ಅವರ ಸರ ಕಸಿದು ಪರಾರಿಯಾಗಿದ್ದಾರೆ.

ಈ ಕುರಿತು ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- chain snatching-gold-case