BREAKING NOW : ಅಚ್ಚರಿ ಬೆಳವಣಿಗೆ ಇಂದೇ ನಾಮಪತ್ರಸಲ್ಲಿಸಿದ ಯದುವೀರ್..!

‌ಮೈಸೂರು, ಏ.೦೧, ೨೦೨೪  ; ಮೈಸೂರು ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯದುವೀರ್ ಕೃಷ್ಣ ರಾಜ ಒಡೆಯರ್ ಅವರು ಇಂದು ನಾಮಪತ್ರ ಸಲ್ಲಿಕೆ.

ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ.ವಿ.ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ತಾಯಿ ಪ್ರಮದಾದೇವಿ ಒಡೆಯರ್‌, ಶಾಸಕ ಶ್ರೀವತ್ಸ ಮತ್ತಿನ್ನಿಬ್ಬರು ಹಾಜರಿದ್ದರು.

ಅಚ್ಚರಿಗೆ ಕಾರಣ : ಈ ಮೊದಲು ಅಭ್ಯರ್ಥಿ ಯದುವೀರ್‌ ಅವರೇ ಖುದ್ದು ವಿಡಿಯೋ ಸಂದೇಶದ ಮೂಲಕ ಏ. ೩ ರಂದು ನಾಮಪತ್ರ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ದಿಢೀರ್‌ ಬೆಳವಣಿಗೆಯಲ್ಲಿ ಇಂದು ಯಾವುದೇ ಸದ್ದುಗದ್ದಲ ಇಲ್ಲದೆ ನಾಮಪತ್ರ ಸಲ್ಲಿಸಿದ್ದು ಅಚ್ಚರಿಗೆ ಕಾರಣವಾಗಿದೆ.

key words : MYSORE, BJP,YADUVVER, NOMINATION