ಸಚಿವರ ರಾಜೀನಾಮೆ ಕೇಳಿದ ‘ಕೈ’ ಮುಖಂಡನ ವಿರುದ್ದ ಮೈಸೂರು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು ಕಿಡಿ…

kannada t-shirts

ಮೈಸೂರು,ಆಗಸ್ಟ್,27,2020(www.justkannada.in): ಬೆಳಗಾವಿ ಜಿಲ್ಲೆಯ ಪಿರಣವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ನವರ ಪ್ರತಿಮೆ ನಿರ್ಮಾಣದ ವಿಚಾರವಾಗಿ ಇರುವ ಗೊಂದಲಕ್ಕೆ ರಾಜಕೀಯ ಹಾಗೂ ಜಾತಿಯ ಜೋಡಿಸುವುದು ಸರಿಯಲ್ಲ ಎಂದು ಮೈಸೂರು  ಕಾಂಗ್ರೆಸ್ ಮುಖಂಡ ಮರಿಗೌಡರಿಗೆ ನಗರ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಜೋಗಿಮಂಜು ತಿರುಗೇಟು ನೀಡಿದ್ದಾರೆ.jk-logo-justkannada-logo

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿರುವ ಜೋಗಿ ಮಂಜು, ಸಂಗೊಳ್ಳಿ ರಾಯಣ್ಣ ಒಬ್ಬ ದೇಶ ಭಕ್ತ, ಬ್ರಿಟಿಷರ ವಿರುದ್ದ ಹೋರಾಡಿದ ಮಹಾನ್ ಕ್ರಾಂತಿಕಾರಿ, ಅಪ್ಪಟ ಕನ್ನಡಿಗ ಹಾಗೂ ನಮ್ಮೇಲ್ಲರಿಗೂ ಆದರ್ಶ ಮಹಾನ್ ಪುರುಷ, ಆದರೆ ಸಂಗೊಳ್ಳಿ ರಾಯಣ್ಣ ನವರ ಪ್ರತಿಮೆ ನಿರ್ಮಾಣದ ವಿಚಾರವಾಗಿ ಇರುವ ಗೊಂದಲಕ್ಕೆ ರಾಜಕೀಯ ಹಾಗೂ ಜಾತಿಯನ್ನು  ಜೋಡಿಸುವುದು ತಪ್ಪು ಎಂದಿದ್ದಾರೆ.

ನಿನ್ನೆ ತಾಂಡವಪುರದಲ್ಲಿ ಪತ್ರಿಕಾಗೋಷ್ಠಿಯ  ನಡೆಸಿ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವರಾದ ಕೆ.ಎಸ್,ಈಶ್ವರಪ್ಪ ಅವರು ಹಾಗೂ ಸರ್ಕಾರದ ಕೆಲವು ಸಚಿವರುಗಳನ್ನು ರಾಜೀನಾಮೆ ಕೇಳಿರುವುದು ಖಂಡನಾರ್ಹ, ಮರಿಗೌಡರಿಗೆ ಅರಿವು ಬಂದಿಲ್ಲ.  ಈಗಾಗಲೇ ಆ.28 ರಂದು ಪಿರಣವಾಡಿಯ ಗೊಂದಲದ ಸ್ಥಳಕ್ಕೆ ಅಧಿಕಾರಿಗಳು ಮತ್ತು ಕೆಲವು ಸ್ಥಳೀಯ  ಹಿರಿಯ ನಾಯಕರೊಂದಿಗೆ ಸಚಿವರು ಭೇಟಿ ನೀಡುತ್ತಿರುವುದು ನಿಶ್ಚಯವಾಗಿದೆ, ಹಾಗೆಯೇ ಬೆಂಗಳೂರು ನಗರದ ಆನಂದರಾವ್ ವೃತ್ತದ ಮೇಲ್ಸೆತುವೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಉದ್ಘಾಟನೆ ಮಾಡಿಲಾಗಿದೆ. ಇದು ಮರಿಗೌಡರ  ಗಮನಕ್ಕೆ ಬಂದಿಲ್ಲ, ಹಾಗೇಯೆ ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾ ನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ನವರ ಭೇಟಿ ಮಾಡಿ ಈ ಗೊಂದಲಕ್ಕೆ ತೆರವು ಎಳೆದಿದಿದ್ದಾರೆ. ಇದರ ಬಗ್ಗೆ ಅವರಿಗೆ ಮಾಹಿತಿ ಇಲ್ಲವೇನು ಎನ್ನಿಸುತ್ತಿದೆ ಎಂದು   ಜೋಗಿ ಮಂಜು ಚಾಟಿ ಬೀಸಿದ್ದಾರೆ.mysore-bjps-morcha-president-jogi-manju-congress-leader

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ,  ಭಾಗದಲ್ಲಿ ಕೇವಲ ಒಂದು ಸಂಗೊಳ್ಳಿ ರಾಯಣ್ಣ ನವರ ಪ್ರತಿಮೆ ನಿರ್ಮಾಣದ ಬಗ್ಗೆ ತಲೆಕಡಡಿಸಿಕೊಳ್ಳದ ಹಾಗೂ 2016 ನೇ ಸಾಲಿನಲ್ಲಿ ಮಹಿಳಾ ಜಿಲ್ಲಾಧಿಕಾರಿಗಳಿಗೆ ಬೆದರಿಕೆಯ ಅರೋಪ ಮೇಲೆ ಜೈಲುವಾಸ ಅನುಭವಿಸಿರುವ ತಾವು ಯಾವ ನೈತಿಕತೆ ಇಟ್ಟುಕೊಂಡು ಮಂತ್ರಿಗಳ ರಾಜೀನಾಮೆ ಕೇಳುತ್ತಿದ್ದೀರಿ..? ಇಂತಹ ಹುಚ್ಚು ಹೇಳಿಕೆಗಳನ್ನು ನಿಲ್ಲಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ ಎಂದು ಮರಿಗೌಡರಿಗೆ ಜೋಗಿ ಮಂಜು ಸಲಹೆ ನೀಡಿದ್ದಾರೆ.

Key words: Mysore- BJP’s -Morcha -president -Jogi Manju –congress- leader

website developers in mysore