Sunday, September 20, 2026

BDA Apartments

Home Front Page ರಾಜ್ಯದ ಎಲ್ಲಾ ಜಿ.ಪಂನಲ್ಲಿ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್.

ರಾಜ್ಯದ ಎಲ್ಲಾ ಜಿ.ಪಂನಲ್ಲಿ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್.

ಮೈಸೂರು,ಜುಲೈ,14,2021(www.justkannada.in): ರಾಜ್ಯದಲದಲಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಡೆಯಲಿದ್ದು ಈ  ಹಿನ್ನಲೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ ಎಲ್ಲಾ ಜಿಲ್ಲಾ ಪಂಚಾಯತಿಗಳಲ್ಲಿ  ಅಧಿಕಾರ ಹಿಡಿಯವ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.jk

ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾ ಪಂಚಾಯತ್ ಗಳಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ವಿಶ್ವಾಸವಿದೆ. ನಮ್ಮ ಮುಂದೆ ಎರಡು ಚುನಾವಣೆಗಳು ಇವೆ. ಒಂದು ಜಿ.ಪಂ, ತಾ.ಪಂ ಚುನಾವಣೆ ಹಾಗೂ ಇನ್ನೊಂದು ವಿಧಾನಪರಿಷತ್ ಚುನಾವಣೆ. ಇವೆರಡು ಚುನಾವಣೆಗಳಿಗೆ ಬಿಜೆಪಿ ಸಿದ್ಧವಾಗುತ್ತಿದೆ.ಹೀಗಾಗಿ ರಾಜ್ಯಾದ್ಯಂತ ಪೂರ್ವಭಾವಿ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದ್ದೇವೆ. ಇಂದು ಮೈಸೂರಿನಲ್ಲಿ ಕಾರ್ಯಕಾರಣಿ ಸಭೆ ಮಾಡಿದ್ದೇವೆ. ಕೆಲವೇ ಹೊತ್ತಿನಲ್ಲಿ ಚಾಮರಾಜನಗರಕ್ಕೂ ಹೋಗುತ್ತಿದ್ದೇನೆ. ಅಲ್ಲಿ ಪಕ್ಷದ ಕಛೇರಿ ನಿರ್ಮಾಣ ಕಾಮಗಾರಿ ವೀಕ್ಷಿಸಲು ಹೋಗುತ್ತಿದ್ದೇನೆ ಎಂದು ತಿಳಿಸಿದರು.

ಕೆಆರ್‌ಎಸ್ ಡ್ಯಾಂ ವಿಚಾರದಲ್ಲಿ ವೈಯಕ್ತಿಕ ಟೀಕೆಗಳ ವಿಚಾರ ಕುರಿತು ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್, ವೈಯಕ್ತಿಕವಾದಂತಹ ಹೇಳಿಕೆಗಳು ಕೊಡುವ ಮುನ್ನ ವೈಚಾರಿಕ ಸಮಸ್ಯೆಗಳ ವಿಚಾರದ ಬಗ್ಗೆ ಮಾತನಾಡಬೇಕು. ಅದು ಬಿಟ್ಟು ವ್ಯಕ್ತಿಗತ ಆಧಾರದ ಮೇಲೆ ಮಾತನಾಡೋದು ಸರಿಯಲ್ಲ. ಇದೆಲ್ಲವನ್ನೂ ಸರ್ಕಾರ ಗಮನಿಸಿದೆ ಸರ್ಕಾರವೇ ಕ್ರಮ ಕೈಗೊಳ್ಳಲಿದೆ ಎಂದರು.

Key words: mysore- BJP –President- Nalin Kumar Kateel -confidence –power-ZPs