ಐಎಎಸ್-ಐಪಿಎಸ್ ಫ್ಯಾನ್ಸ್ ಗಳ ಫೇಸ್ ಬುಕ್ ಪೇಜ್ ನಿಷೇಧಿಸಿ : ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ ಸಂಸದ

 

ಮೈಸೂರು, ಆ.20, 2021 : (www.justkannada.in news) : ರಾಜ್ಯದಲ್ಲಿನ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಿಸುವಂತೆ ಸಂಸದ ಪ್ರತಾಪಸಿಂಹ ಒತ್ತಾಯಿಸಿದ ಘಟನೆ ನಡೆದಿದೆ.

ಮೈಸೂರಿನ ಹೊರವಲಯದಲ್ಲಿ ಇಂದು ಆಯೋಜಿಸಿದ್ದ ಕೈಗಾರಿಕೋದ್ಯಮಿಗಳ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಅವರಿಗೆ ಮನವಿ ಮಾಡಿದ ಸಂಸದರು, ಐಎಎಸ್, ಐಪಿಎಸ್ ಅಧಿಕಾರಿಗಳು ಏನೂ ಕೆಲಸ ಮಾಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು.

ಅಧಿಕಾರಿಗಳು ಮಾಡಿದ ಕೆಲಸಗಳನ್ನ ಜಿಲ್ಲೆಯಿಂದ ಒಂದು ಅಕೌಂಟ್ ತೆರೆದು ಅದರಲ್ಲಿ ಮಾಹಿತಿ ಹಾಕಲಿ. ಫ್ಯಾನ್ಸ್ ಫೇಜ್ ಗಳಿಂದ ಕೇವಲ ಹೊಗಳಿಕೆಗಳು ಸೃಷ್ಟಿಯಾಗಿದೆ. ಯಾರೋ ಒಬ್ಬ ಲಾಠಿ ಹಿಡಿದು ಓಡಾಡಿದ್ರೆ ಹಾಗೆ ಹೀಗೆ ಅಂತ ಬಿಂಬಿಸಲಾಗ್ತಿದೆ. ಐಎಎಸ್, ಐಪಿಎಸ್ ಅಧಿಕಾರಿಗಳು ಉತ್ತಮ ಕೆಲಸಗಳನ್ನ ಮಾಡಬೇಕು.

ಹಾಸನದಲ್ಲಿ ಕೇಂದ್ರ ಸರ್ಕಾರದಿಂದ ರಸ್ತೆ ನಿರ್ಮಾಣ ಮಾಡಬೇಕಾದರೆ ಅಲ್ಲಿನ ಜಿಲ್ಲಾಧಿಕಾರಿ ಸಹಕಾರ ನೀಡಲೇ ಇಲ್ಲ. ಐಎಎಸ್ ಅಧಿಕಾರಿಗಳು ವಿಷನ್ ಇಟ್ಕೊಂಡು ಕೆಲಸ ಮಾಡಬೇಕು ಎಂಬುದು ಸಂಸದರ ಸಲಹೆ.

ಸಮಾರಂಭದಲ್ಲಿ ಸಚಿವ ಅಶ್ಚಥ್ ನಾರಾಯಣ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ರಾಜವಂಶಸ್ಥ ಯದುವೀರ್ ಉಪಸ್ಥಿತರಿದ್ದರು.

ಎಸ್.ಎಂ ಕೃಷ್ಣ ರಂತಹ ಮುಖ್ಯಮಂತ್ರಿ ಇಷ್ಟ :

ಎಸ್.ಎಂ ಕೃಷ್ಣ ಅವರು ರಾಜ್ಯದ ಸಿಎಂ ಆಗಿದ್ದಾಗ ಕೈಗಾರಿಕೆ ಬೆಳವಣಿಗೆಗೆ ಉತ್ತೇಜನ ನೀಡಿದ್ದರು. ಕೃಷ್ಣ ಅವರ ಮುಂದಾಲೋಚನೆ ಕೆಲಸಗಳನ್ನ ಎಲ್ಲರೂ ಫಾಲೋ ಮಾಡಬೇಕು. ನಾನು ಬಿಜೆಪಿಯವನಾಗಿರಬಹುದು. ಆದರೂ ನಾನು ಎಲ್ಲ ಸಿಎಂಗಿಂತ ಎಸ್.ಎಂ ಕೃಷ್ಣ ಅವರನ್ನ ಬಹಳ ಇಷ್ಟ ಪಡ್ತೇನೆ. ಅವರ ಕಾರ್ಯವೈಖರಿ ನನಗೆ ವೈಯಕ್ತಿಕವಾಗಿ ಇಷ್ಟ ಎಂದ ಸಂಸದ ಪ್ರತಾಪಸಿಂಹ.

key words : mysore-bjp-mp-prathap.simha-facebook.page-ban