ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿಗೆ ಮೈಸೂರು ಬಿಜೆಪಿ ನಿಯೋಗ ಮನವಿ.

ಮೈಸೂರು,ಸೆಪ್ಟಂಬರ್,15,2021(www.justkannada.in): ಪ್ರತಿವರ್ಷವೂ ವಿವಾದದಲ್ಲೇ ಜರುಗುತ್ತಿರುವ ಮಹಿಷಾ ದಸರಾ, ಈ ಬಾರಿ ಅಕ್ಟೋಬರ್ 5ಕ್ಕೆ ನಡೆಯಲಿದೆ. ಆದರೆ ಮಹಿಷಾ ದಸರಾ ಆಚರಣೆಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ  ಮೈಸೂರು ಬಿಜೆಪಿ ನಿಯೋಗ ಮನವಿ ಮಾಡಿದೆ.

ಡಿಸಿ ಕಛೇರಿಗೆ ತೆರಳಿ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಗೆ ಮೈಸೂರು ಬಿಜೆಪಿ ನಾಯಕರು ಮನವಿ ಸಲ್ಲಿಸಿದ್ದಾರೆ. ಸಿ ಎಚ್ ವಿಜಯಶಂಕರ್, ಮೈವಿ ರವಿಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್ ನೇತೃತ್ವದ ಬಿಜೆಪಿ ನಿಯೋಗ ಮನವಿ ಮಾಡಿದೆ.

ಈ ಬಾರಿ ಅನುಮತಿ ನೀಡದಿದ್ದರೂ ಮಹಿಷಾ ದಸರಾ ಮಾಡುತ್ತೇವೆ ಎಂದು ಮಹಿಷಾ ದಸರಾ ಆಚರಣಾ ಸಮಿತಿ ಸವಾಲು ಹಾಕಿದೆ.

Key words: Mysore- BJP- delegation –DC-not –allow- Mahisha Dasara