Sunday, September 20, 2026

BDA Apartments

ವಿಜಯಾನಂದ ಕಾಶಪ್ಪನವರ್ ಆರೋಪಕ್ಕೆ ತಿರುಗೇಟು ನೀಡಿದ ಬಿ.ವೈ.ವಿಜಯೇಂದ್ರ… BDA JK_Adv...
Home Front Page ವಿಜಯಾನಂದ ಕಾಶಪ್ಪನವರ್ ಆರೋಪಕ್ಕೆ ತಿರುಗೇಟು ನೀಡಿದ  ಬಿ.ವೈ.ವಿಜಯೇಂದ್ರ….

ವಿಜಯಾನಂದ ಕಾಶಪ್ಪನವರ್ ಆರೋಪಕ್ಕೆ ತಿರುಗೇಟು ನೀಡಿದ  ಬಿ.ವೈ.ವಿಜಯೇಂದ್ರ….

ಮೈಸೂರು,ಫೆಬ್ರವರಿ,13,2021(www.justkannada.in):  ಮೀಸಲಾತಿ ಹೋರಾಟವನ್ನ ಹತ್ತಿಕ್ಕುತ್ತಿದ್ದಾರೆ ಎಂದು ತಮ್ಮ ವಿರುದ್ಧ ಆರೋಪಿಸಿದ  ವಿಜಯಾನಂದ ಕಾಶಪ್ಪನವರ್ ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.jk

ಮೈಸೂರಿನಲ್ಲಿ ಇಂದು ಮಾತನಾಡಿದ  ಬಿವೈ ವಿಜಯೇಂದ್ರ, ಕಾಶಪ್ಪನವರ್ ಅಂದ್ರೆ ಯಾರು ? ಮಾಜಿ ಶಾಸಕನಾ ಅಥವಾ ಬಾರಲ್ಲಿ ಕುಳಿತು ಗಲಾಟೆ ಮಾಡಿಕೊಂಡನಲ್ಲ ಅವನಾ ? ಎಂದು ವ್ಯಂಗ್ಯವಾಡಿದರು.

ಎಲ್ಲ ಸಮುದಾಯಗಳಿಗೂ ಮೀಸಲಾತಿ ಕೇಳುವ ಹಕ್ಕಿದೆ. ಸವಾಲುಗಳನ್ನೂ ನಿಭಾಯಿಸುವ ಶಕ್ತಿ ಯಡಿಯೂರಪ್ಪ ಅವರಿಗೆ ಇದೆ. ಯಾರೋ ಹಾದಿ ಬೀದಿಯಲ್ಲಿ ನಿಂತು ಏನೇನೋ ಹೇಳಿಕೆ ನೀಡಬಾರದು. ಯಾರ ಯೋಗ್ಯತೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಪಕ್ಷದ ಉಪಾಧ್ಯಕ್ಷನಾಗಿ ನನ್ನ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ.  ಯಾವ ಹೋರಾಟವನ್ನೂ ದಿಕ್ಕುತಪ್ಪಿಸುವ ಕೆಲಸ ಮಾಡಿಲ್ಲ. ಅದು ನನಗೆ ಸಂಬಂಧಪಟ್ಟ ವಿಚಾರವೂ ಅಲ್ಲ. ಯಡಿಯೂರಪ್ಪ ಅವರು ಯಾವ ಸಮುದಾಯವನ್ನೂ ಹೊಡೆಯುವುದಿಲ್ಲ.  ಎಲ್ಲರಿಗೂ ನ್ಯಾಯ ದೊರಕಿಸುವ ಶಕ್ತಿ, ರಾಜಕೀಯ ಅನುಭವ ಅವರಿಗೆ ಇದೆ ಎಂದರು.mysore- BJP-BY Vijayendra -Vijayananda Kashappanavar.

ಮೀಸಲಾತಿ ಹೋರಾಟಗಳು ರಾಜಕೀಯ ಲಾಭಕ್ಕೆ ಬಳಕೆ ಮಾಡಲಾಗುತ್ತಿದೆ. ಸ್ವಾಮೀಜಿಗಳು ಮೀಸಲಾತಿ ಹೋರಾಟ ಮಾಡುವುದಕ್ಕೆ ನಮ್ಮ ತಕರಾರು ಇಲ್ಲ.  ತಮ್ಮ ಸಮುದಾಯಗಳ ಪರವಾಗಿ ಹೋರಾಟ ಮಾಡುವುದು ಸರಿಯಾಗಿಯೇ ಇದೆ. ಆದರೆ ಕೆಲವರು ಮೀಸಲಾತಿ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ.  ಇದು ಬೇಸರದ ಸಂಗತಿ ಎಂದರು.

Key words: mysore- BJP-BY Vijayendra -Vijayananda Kashappanavar.