ಸಂಸದರೆ ಭ್ರಮೆಯಿಂದ ಹೊರಬನ್ನಿ : ಪ್ರತಾಪ್ ಸಿಂಹಗೆ ಕರ್ತವ್ಯ ‘ ನೆನಪಿಸಿ’ದ ರತ್ನಜ.

mysore-bangalore-high.way-road-mp

0
1

 

ಮಂಡ್ಯ, ಆ.02, 2022 : (www.justkannada.in news) : ಮೈಸೂರು- ಬೆಂಗಳೂರು ಹೆದ್ದಾರಿ ರಸ್ತೆ ಅವೈಜ್ಞಾನಿಕವಾಗಿ, ತರಾತುರಿಯಲ್ಲಿ ನಿರ್ಮಿಸಲಾಗುತ್ತಿದೆ. ಜತೆಗೆ ಕಳಪೆ ಗುಣಮಟ್ಟದಿಂದ ಕೂಡಿದೆ. ಇದರಿಂದ ಗ್ರಾಮಸ್ಥರು, ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಪ್ರಗತಿಪರ ಕೃಷಿಕ ರತ್ನಜ (ಸ್ಯಾಂಡಲ್ ವುಡ್ ನಿರ್ದೇಶಕರು) ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಜಸ್ಟ್ ಕನ್ನಡಗೆ ಮಾಹಿತಿ ನೀಡಿರುವ ರತ್ನಜ ಅವರು ಹೇಳಿದಿಷ್ಟು..

ಮೈಸೂರು- ಬೆಂಗಳೂರು ಹೆದ್ದಾರಿಯನ್ನು ದಸರಾ ವೇಳೆಗೆ, ವಾಹನಗಳ ಓಡಾಟಕ್ಕೆ ಸಿದ್ಧ ಪಡಿಸಲು ಧಾವಂತದಲ್ಲಿರುವ ಮಾನ್ಯ ಮೈಸೂರು ಸಂಸದ ಪ್ರತಾಪ್ ಸಿಂಹ ಅವರೆ!! ಮೊದಲು ಹೆದ್ದಾರಿ ನಿರ್ಮಾಣದ ವೇಳೆ ಹಾಳುಗೆಡಗಿರುವ ಸರ್ವಿಸ್ ರಸ್ತೆ ಮತ್ತು ಅದರಿಂದ ಹಳ್ಳಿ ಜನರಿಗೆ, ಕೃಷಿಕರಿಗೆ ಉಂಟಾಗಿರುವ ತೊಂದರೆಗಳನ್ನು ಸರಿಪಡಿಸಲು ಗಮನಹರಿಸಿ!

ಮಂಡ್ಯ ಭಾಗದ ಗೆಜ್ಜಲಗೆರೆ , ಹನಕೆರೆ, ಬೂದನೂರು ಗ್ರಾಮಗಳ ಬಳಿ ಸರ್ವಿಸ್ ರಸ್ತೆಯನ್ನು ಹಾಳುಗೆಡವಿ, ಅವೈಜ್ಞಾನಿಕವಾಗಿ ಮೇಲ್ಸೇತುವೆ, ಕಳಪೆಮಟ್ಟದ ಡಕ್ (ರಸ್ತೆ ಬದಿಯ ನೀರುಗಾಲುವೆ) ಗಳನ್ನು ನಿರ್ಮಿಸಿರುವ ಕಾರಣ, ಮಳೆ ಬಂದಾಗ ರೈತರ ಗದ್ದೆಗಳಗೆ, ಅಂಗಡಿ ಮನೆಗಳಿಗೆ ನೀರು ನುಗ್ಗುತ್ತಿದ್ದು ಅದು ಜನರ ಬೆಳೆ- ವ್ಯಾಪಾರ, ನೆಮ್ಮದಿಯನ್ನು ಹಾಳುಗೆಡವುತ್ತಿದೆ.

ಸಂಸದರೆ ನೀವು ಬೇಕಾಬಿಟ್ಟಿ ಸರ್ವಿಸ್ ರಸ್ತೆ ನಿರ್ಮಿಸಿ ಹೆದ್ದಾರಿಯನ್ನು ಸರಿಪಡಿಸಿಕೊಂಡರೆ ಸಾಕು ಎಂಬ ಮನೋಭಾವದಲ್ಲಿದ್ದರೆ ಅದು ನಿಮ್ಮ ಭ್ರಮೆ! ನಿಮಗೆ ಇಲ್ಲಿನ ಜನರ ಆಕ್ರೋಶದ ಅರಿವಿಲ್ಲ! ಈ ಬಾರಿಯ ದಸರಾವಲ್ಲ, ಇನ್ನೂ ಹತ್ತು ವರ್ಷವಾದರೂ ಹೆದ್ದಾರಿಯಲ್ಲಿ ಒಂದು ವಾಹನಗಳು ಓಡಾಡಲು ಅವಕಾಶ ನೀಡದಿರುವ ಛಲ – ಸಾಮರ್ಥ್ಯ ಇಲ್ಲಿನ ಜನರಿಗಿದೆ. ಸಮಸ್ಯೆ ಬಗೆಹರಿಸಿ ಇಲ್ಲವೆ ಪರಿಣಾಮ ಎದುರಿಸಲು ಸಿದ್ಧರಾಗಿ!.

– ರತ್ನಜ

key words : mysore-bangalore-high.way-road-mp