ಮೈಸೂರಿನಲ್ಲಿ ಆತಂಕ ಸೃಷ್ಠಿಸಿದ್ದ ಬ್ಯಾಗ್ ನ ಮಾಲೀಕ ಪತ್ತೆ: ಬ್ಯಾಗ್ ನಲ್ಲಿದ್ದಿದ್ದು ಏನು ಗೊತ್ತೆ…?

ಮೈಸೂರು,ಜೂ,16,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಅನುಮಾನಸ್ಪದವಾಗಿ ಬ್ಯಾಗ್ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಠಿಸಿತ್ತು.  ಆ ಬ್ಯಾಗ್ ಒಳಗೆ ಬಟ್ಟೆ ಇರುವುದು ಇದೀಗ ಕಂಡು ಬಂದಿದೆ.

ಸಯ್ಯಾಜೀ ರಾವ್ ರಸ್ತೆಯಲ್ಲಿ ಅನುಮಾನಸ್ಪದವಾಗಿ  ಬ್ಯಾಗ್ ಪತ್ತೆಯಾದ ಹಿನ್ನೆಲೆ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈ ವೇಳೆ ಬ್ಯಾಗ್ ಒಳಗೆ ಬಟ್ಟೆ ಇರುವುದು ಕಂಡುಬಂದಿದ್ದು ಇದರಿಂದಾಗಿ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.Mysore-bag - anxiety – discovered-police

ಇನ್ನು ಬ್ಯಾಗ್ ಯಾರದ್ದು ಎಂಬುದನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೌದು, ಸೆಂದಿಲ್ ಕುಮಾರ್ ಟೆಕ್ಸ್ ಟೈಲ್ಸ್ ಮುಂಭಾಗ ಬಂದಿದ್ದ ಗ್ರಾಹಕನೋರ್ವ ಬಟ್ಟೆ ಬ್ಯಾಗ್ ಬಿಟ್ಟು ಹೋಗಿ ಯಡವಟ್ಟು ಮಾಡಿದ್ದನು. ಈ ವೇಳೆ ಬ್ಯಾಗ್ ಕಂಡು ಸಾಕಷ್ಟು ಆತಂಕ ಸೃಷ್ಠಿಯಾಗಿತ್ತು.

ಇದೀಗ ಪೊಲೀಸರು ಗ್ರಾಹಕನನ್ನು ಪತ್ತೆ ಹಚ್ಚಿ ಠಾಣೆಗೆ ಕರೆಸಿ ಬ್ಯಾಗ್ ಕೊಟ್ಟಿದ್ದಾರೆ. ಹಾಗೆಯೇ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

Key words: Mysore-bag – anxiety – discovered-police