ರಾಜ್ಯದ ಪ್ರಸ್ತುತ ಪರಿಸ್ಥಿತಿಯಲ್ಲೂ ಕೇಂದ್ರದಿಂದ ಮಲತಾಯಿ ಧೋರಣೆ- ಬಡಗಲಪುರ ನಾಗೇಂದ್ರ ಕಿಡಿ

ಮೈಸೂರು,ಆ,14,2019(www.justkannada.in): ರಾಜ್ಯದ ಮುಕ್ಕಾಲು ಭಾಗ ಪ್ರವಾಹ ಪೀಡಿತವಾಗಿದ್ದು,  ರಾಜ್ಯದ ಪ್ರಸ್ತುತ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಕ್ತ ನೆರವು ನೀಡುತ್ತಿಲ್ಲ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಕಿಡಿಕಾರಿದರು.

ಮಾಧ್ಯಮಗಳ ಜತೆ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ಹೊರ ಹಾಕಿದ ಬಡಗಲಪುರ ನಾಗೇಂದ್ರ, ಚುನಾವಣೆ ಸಂದರ್ಭದಲ್ಲಿ ಒಡಿಸ್ಸಾಗೆ ಚುನಾವಣಾ ಪ್ರಚಾರ ನಿಲ್ಲಿಸಿ ವೈಮಾನಿಕ ಸಮೀಕ್ಷೆ ಮಾಡಿದ್ದರು. ಆದ್ರೇ ರಾಜ್ಯದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನ ಕೇವಲ ರಾಜ್ಯ ಸರ್ಕಾರ ನಿಭಾಯಿಸುವುದು ಕಷ್ಟ. ಈಗಾಗಿ ರಾಜ್ಯಯನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಬೇಕು. ಸದ್ಯ ಮುಖ್ಯಮಂತ್ರಿಗಳು ಬಹಳಷ್ಟು ಹೋರಾಟ ಮಾಡುತ್ತಿದ್ದಾರೆ. ರಾಜ್ಯದಿಂದ ಸುಮಾರು 25 ಸಂಸದರನ್ನು ಬಿಜೆಪಿ ಸರ್ಕಾರಕ್ಕೆ ನೀಡಲಾಗಿದೆ. ಸಂಸದರು ಸಹ ಇದಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.

ಮೈಸೂರು ಭಾಗದಲ್ಲಿ ರೈತ ಸಂಘ ಸಮೀಕ್ಷೆ ಪ್ರಾರಂಭಿಸಿದೆ..

ಇನ್ನು  ಈಗಾಗಲೇ ಮೈಸೂರು ಭಾಗದಲ್ಲಿ ರೈತ ಸಂಘ ಸಮೀಕ್ಷೆ ಪ್ರಾರಂಭಿಸಿದೆ. ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆಗಳನ್ನ ಕೈಗೊಳ್ಳಲಾಗುತ್ತೆ. ಈಗಾಗಲೇ ನಮ್ಮ ತಂಡ ಉತ್ತರದ ಭಾಗಕ್ಕೆ ಹೋಗಲು ಸಿದ್ಧವಾಗಿದೆ. ರಾಜ್ಯ ಸರ್ಕಾರ ಕಿಶನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ರೈತರಿಗೆ  2 ಸಾವಿರ ಹಣ ನೀಡಲು ಮುಂದಾಗಿದೆ. ಇದು ರಾಜ್ಯ ಸರ್ಕಾರ ರೈತರಿಗೆ ಭಿಕ್ಷೆ ನೀಡುವ ರೀತಿ ಇದೆ. ಇದು ನಮಗೆ ಬೇಡ ಎಂದು ಬಡಗಲಪುರ ನಾಗೇಂದ್ರ ಹರಿಹಾಯ್ದರು.

ಎನ್. ಎಸ್. ವರ್ಮ ಟೀಕೆಗೆ ಬಡಗಲಪುರ ನಾಗೇಂದ್ರರಿಂದ ತಿರುಗೇಟು.

ಶಾಂತಕುಮಾರ್ ಮತ್ತು ಬಡಗಲಪುರ ನಾಗೇಂದ್ರ ಖಳನಾಯಕರು ರೈತ ಮುಖಂಡರಲ್ಲ ಎಂದು ಟೀಕೆ ಮಾಡಿದ್ದ ಎನ್. ಎಸ್. ವರ್ಮ  ಅವರಿಗೆ ತಿರುಗೇಟು ನೀಡಿದ ಬಡಗಲಪುರ ನಾಗೇಂದ್ರ, ವರ್ಮನ ಪರಿಚಯ ನನಗೆ ತುಂಬಾ ಚೆನ್ನಾಗಿದೆ. ಆತ ಯಾವುದೇ ಒಂದು ರೈತ ಚಳುವಳಿಗಳಲ್ಲಿ ಭಾಗಿಯಾಗಿಲ್ಲ. ರೈತರ ಸಂಘಟನೆಯಲ್ಲೂ ಆತ ತೊಡಗಿಲ್ಲ. ಮಂಗಳೂರಿನಲ್ಲಿ ಪೋಲಿಸರು ಬಂದ ಸಂದರ್ಭದಲ್ಲಿ ಹಸಿರು ಶಾಲನ್ನು ಮರೆ ಮಾಚಿ ಓಡಿ ಹೋಗಿದ್ದನ್ನು ನಾನು ನೋಡಿದ್ದೇನೆ. ಆ ವ್ಯಕ್ತಿಯ ಬಗ್ಗೆ ಮಾತನಾಡುವುದು ವ್ಯರ್ಥ ಎಂದು ಕಿಡಿಕಾರಿದರು.

Keywords: mysore- badagalapura  nagendra-outrage-against-central gavrnament