ನಶಾ ಮುಕ್ತ ಭಾರತ ಅಭಿಯಾನ: ಬೈಕ್ ಜಾಥಾ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ.

ಮೈಸೂರು ಆಗಸ್ಟ್,29,2025 (www.justkannada.in): ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯವು ಆಚರಿಸುತ್ತಿರುವ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಇಂದಿನಿಂದ 31ರವರೆಗೆ ಬಂಡೀಪುರದಿಂದ ಬೀದರ್‍ ವರೆಗೆ ಹಮ್ಮಿಕೊಂಡಿರುವ ಮೂರು ದಿನಗಳ ಬೈಕ್ ಜಾಥಾವನ್ನು ಮೈಸೂರು ನಗರದ ಬಂಡಿಪಾಳ್ಯ ಸರ್ಕಲ್ ನಲ್ಲಿ  ಬರಮಾಡಿಕೊಂಡು ನಶಾ ಮುಕ್ತ ಭಾರತ ಅಭಿಯಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಯುವ ಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾಸ್ಕರ್ ರಾವ್ ಅವರು ನೆರೆದಿದ್ದ ಸಾರ್ವಜನಿಕರಿಗೆ ಹಾಗೂ ಎನ್.ಎನ್.ಎಸ್. ಸ್ವಯಂ ಸೇವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಎನ್.ಎನ್.ಎಸ್. ಕೋಶದ ಅಧಿಕಾರಿಗಳಾದ ಡಾ. ಪ್ರತಾಪ್ ಲಿಂಗಯ್ಯ, ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಯ ಅಧಿಕಾರಿ ಡಾ. ನಿಂಗರಾಜು, ಮಹಾರಾಜ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಡಾ ಮಧುಸೂದನ್, ಮಹಾರಾಜ ಕಾಲೇಜಿನ ಕಾರ್ಯಕ್ರಮ ಸಂಯೋಜಧಿಕಾರಿ ಡಾ. ಸುನೀಲ್, ಕ್ರೈಸ್ಟ್ ಪ್ರಧಮ ದರ್ಜೆ ಕಾಲೇಜು ಹಾಗೂ ಜೆ.ಎಸ್.ಎಸ್. ಪ್ರಧಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Key words: Mysore, Awareness, public, bike jatha