Thursday, September 17, 2026

BDA Apartments

ಕಾರು ಅಡ್ಡಗಟ್ಟಿ ಯೋಗ ಮಾಸ್ಟರ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ… BDA JK_Adv BDA Adv
Home Crime ಕಾರು ಅಡ್ಡಗಟ್ಟಿ ಯೋಗ ಮಾಸ್ಟರ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ….

ಕಾರು ಅಡ್ಡಗಟ್ಟಿ ಯೋಗ ಮಾಸ್ಟರ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ….

ಮೈಸೂರು,ಸೆಪ್ಟಂಬರ್,7,2020(www.justkannada.in): ಕ್ಷುಲ್ಲಕ ಕಾರಣಕ್ಕೆ ಹುಡುಗರ ಗುಂಪೂಂದು ಕಾರಿನಲ್ಲಿ ಬರುತ್ತಿದ್ದವರನ್ನು ಅಡ್ಡಗಟ್ಟಿ ಅವರ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.mysore-assault-yoga-master-car

ಮೈಸೂರು ನಗರದ ಪಾಲಿಕೆ‌ ಹಿಂಭಾಗದ ರಸ್ತೆಯಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ವಿಜಯನಗರ ನಿವಾಸಿ ಯೋಗ ಮಾಸ್ಟರ್ ಅನಿಲ್ ಎಂಬುವರು ಮೇಲೆ ಹಲ್ಲೆ ನಡೆದಿದೆ. ಅನಿಲ್ ತಮ್ಮ ಕಾರಿನಲ್ಲಿ ಬರುತ್ತಿದ್ದ ವೇಳೆ ಹುಡುಗರ ಗುಂಪೊಂದು ಕಾರನ್ನ ಅಡ್ಡಗಟ್ಟಿ  ಅನಿಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಅನಿಲ್ ಅವರ ಸ್ನೇಹಿತರ ಮೇಲೂ ಹುಡುಗರ ಗುಂಪು ಹಲ್ಲೆ ನಡೆಸಿದರಲ್ಲದೇ ಕಾರಿಗೂ ಹಾನಿ ಮಾಡಿದ್ದಾರೆ ಎನ್ನಲಾಗಿದೆ.

ತೀವ್ರ ಹಲ್ಲೆ ನಡೆಸಿದ ಪರಿಣಾಮ ಅನಿಲ್ ಅವರ ತಲೆಗೆ ಗಂಭೀರ ಗಾಯವಾಗಿದೆ.  ಮೈಸೂರಿನಲ್ಲಿ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ರಾತ್ರಿ ವೇಳೆಯಲ್ಲಿ ಸಂಚರಿಸುವುದೇ ಕಷ್ಟವಾಗಿದ್ದು, ಪೊಲೀಸರು ಈ ಕುರಿತು ಹೆಚ್ಚಿನ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹಲ್ಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದರ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದು, ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. ಈ ಕುರಿತು ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  mysore- assault – yoga master – car.