Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Front Page ವಿಬಿಎಫ್ ಕಾವೇರಿ ವಾಹಿನಿಗೆ ನೂತನ ಪದಾಧಿಕಾರಿಗಳ ನೇಮಕ.

ವಿಬಿಎಫ್ ಕಾವೇರಿ ವಾಹಿನಿಗೆ ನೂತನ ಪದಾಧಿಕಾರಿಗಳ ನೇಮಕ.

ಮೈಸೂರು,ಅಕ್ಟೋಬರ್,25,2022(www.justkannada.in):  ಮೈಸೂರಿನಲ್ಲಿ ವಿಪ್ರ ಬ್ರಾಹ್ಮಣ ವೇದಿಕೆ(ವಿಬಿಎಫ್) ಅಸ್ತಿತ್ವಕ್ಕೆ ಬಂದಿದ್ದು, ವೇದಿಕೆಯಡಿ ಕಾವೇರಿ ವಾಹಿನಿಯ ನಿರ್ದೇಶಕರಾಗಿ ನಾಗರಾಜು ಪಡುಕೋಟೆ ನೇಮಕಗೊಂಡಿದ್ದಾರೆ. ಉಪನಿರ್ದೇಶಕರಾಗಿ ಗಣೇಶ್ ಹಾಗೂ ಪ್ರಿಯಾ ಅವರನ್ನು ನಿಯೋಜಿಸಲಾಗಿದೆ.

ಮೈಸೂರಿನ ಖಾಸಗಿ ಹೊಟೇಲ್‌ ನಲ್ಲಿ ನಡೆದ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ನಡೆಯಿತು. ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ, ಉದ್ಯಮಿ ಡಿ.ಟಿ. ಪ್ರಕಾಶ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಎಲ್ಲ ಸಮಾಜಗಳ ವಿಶ್ವಾಸದೊಂದಿಗೆ ಸಮಾಜದಲ್ಲಿ ಬ್ರಾಹ್ಮಣ ಸಮುದಾಯದವರು ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.ವಿಬಿಎಫ್ ಕಾವೇರಿ ವಾಹಿನಿಗೆ ನೂತನ ಪದಾಧಿಕಾರಿಗಳ ನೇಮಕ vbf

ಡಿಎಫ್‌ ಆರ್‌ ಎಲ್‌ ನ ನಿವೃತ್ತ ವಿಜ್ಞಾನಿ ಡಾ. ವಿಭಾಕರ ಶರ್ಮ, ಚಿತ್ರ ನಿರ್ಮಾಪಕ ಮಧುಸೂಧನ್ ಹವಾಲ್ದಾರ್, ವಿಬಿಎಫ್‌ ನ ಅಧ್ಯಕ್ಷ ಕೆ.ಆರ್.ಜಯತೀರ್ಥ, ಉಪಾಧ್ಯಕ್ಷ ವಿಜಯರಾವ್,  ಕಾರ್ಯದರ್ಶಿ ಗಣಪತಿ ಭಟ್, ಮುರಳೀಧರ್ ಕಳಸಾಪುರ ಮತ್ತಿತರರು ಹಾಜರಿದ್ದರು.

Key words: mysore-Appointment -new officer – VBF- Cauvery channel.