Sunday, August 23, 2026

BDA Apartments

Home Crime ಆಂಬ್ಯುಲೆನ್ಸ್ ಗೆ ದಾರಿ ಬಿಡದೆ ಕಿರಿಕ್ ಆರೋಪ: ಬೈಕ್ ಸವಾರನ ವಿರುದ್ದ ಪ್ರಕರಣ ದಾಖಲು.

ಆಂಬ್ಯುಲೆನ್ಸ್ ಗೆ ದಾರಿ ಬಿಡದೆ ಕಿರಿಕ್ ಆರೋಪ: ಬೈಕ್ ಸವಾರನ ವಿರುದ್ದ ಪ್ರಕರಣ ದಾಖಲು.

ಮೈಸೂರು,ಜುಲೈ,11,2023(www.justkannada.in):  ರೋಗಿಯನ್ನು ಕರೆತರುತ್ತಿದ್ದ ಆಂಬ್ಯುಲೆನ್ಸ್ ಮುಂದೆ ಸಾಗಲು ದಾರಿ ಬಿಡದೆ ಕಿರಿಕ್ ಮಾಡಿದ ಆರೋಪದ ಮೇಲೆ ಬೈಕ್ ಸವಾರನ ವಿರುದ್ದ ಪ್ರಕರಣ ದಾಖಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಗಗನ್ ಎಂಬಾತನ ವಿರುದ್ದ ನಗರದ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.  ತುರ್ತುವಾಹನ ಸಂಚಾರಕ್ಕೆ ಅಡಚಣೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಜುಲೈ 9 ರಂದು ಈ ಘಟನೆ ನಡೆದಿತ್ತು. ಹುಣಸೂರಿನಿಂದ ಮೈಸೂರಿಗೆ 108 ಆಂಬ್ಯಲೆನ್ಸ್ ನಲ್ಲಿ ರೋಗಿಯನ್ನ ಕರೆತರಲಾಗುತ್ತಿತ್ತು. ಈ ವೇಳೆ ಬಸಪ್ಪ ಮೆಮೋರಿಯಲ್ ಆಸ್ಪತ್ರೆ ಬಳಿ ಬೈಕ್ ಸವಾರ ಆಂಬ್ಯಲೆನ್ಸ್ ಗೆ ಅಡ್ಡಬಂದಿದ್ದು, ಮುಂದೆ ಸಾಗಲು ಅಡ್ಡಿಪಡಿಸಿದ್ದಾನೆ. ಆಂಬ್ಯಲೆನ್ಸ್ ಸಿಬ್ಬಂದಿ ಪ್ರಕಾಶ್ ಬೈಕ್ ಸವಾರನ ವರ್ತನೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ವಿಡಿಯೋ ಆಧಾರಿಸಿ ವಿವಿಪುರಂ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Key words: mysore– ambulance-case – registered-against – biker