ಹೆಲಿಕ್ಯಾಪ್ಟರ್ ತರಬೇತಿ ಕೇಂದ್ರದ ಸ್ಥಾಪನೆಗೆ ಮೈಸೂರು ವಿಮಾನ ನಿಲ್ದಾಣ ಕೊಡುವುದಕ್ಕೆ ಬಿಡಲ್ಲ- ಸಂಸದ ಪ್ರತಾಪ್ ಸಿಂಹ…

ಮೈಸೂರು,ಜನವರಿ,8,2021(www.justkannada.in):  ವಾಯುಪಡೆಯ ಹೆಲಿಕಾಪ್ಟರ್ ತರಬೇತಿ ವಿಭಾಗವನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸುವ ಪ್ರಸ್ತಾಪ ಹಿನ್ನೆಲೆ  ಈ ಬಗ್ಗೆ ಟ್ವೀಟ್ ಮಾಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಹೆಲಿಕ್ಯಾಪ್ಟರ್ ತರಬೇತಿ ಕೇಂದ್ರದ ಸ್ಥಾಪನೆಗೆ ಮೈಸೂರು ವಿಮಾನ ನಿಲ್ದಾಣ ಕೊಡುವುದಕ್ಕೆ ನಾನು ಬಿಡುವುದಿಲ್ಲ ಎಂದಿದ್ದಾರೆ.mysore-airport-not-allowed-helicopter-training-center-mp-prathap-simha

ಈ ಕುರಿತು ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಸನ್ಮಾನ್ಯ ಮುಖ್ಯಮಂತ್ರಿ ರವರು ಈಗಾಗಲೇ 50 ಕೋಟಿ ಪ್ರಾರಂಭಿಕ ಮೊತ್ತ ನೀಡಿದ್ದಾರೆ. ವಾಯುಸೇನೆಯ ಹೆಲಿಕ್ಯಾಪ್ಟರ್ ತರಬೇತಿ ಕೇಂದ್ರದ ಸ್ಥಾಪನೆಗೆ ಮೈಸೂರು ವಿಮಾನ ನಿಲ್ದಾಣವನ್ನು ಕೊಡುವುದಿಲ್ಲ ಹಾಗು ಕೊಡುವುದಕ್ಕೆ ನಾನು ಬಿಡುವುದೂ ಇಲ್ಲ. ಆತಂಕ ಬೇಡ ಎಂದು ಹೇಳಿದ್ದಾರೆ.mysore-airport-not-allowed-helicopter-training-center-mp-prathap-simha

Key words: Mysore Airport – not allowed- helicopter training center-MP Prathap simha