ನಾಳೆ ಮೈಸೂರಿನ ಐಶ್(AIISH)ನಲ್ಲಿ ‘ಅಂತರರಾಷ್ಟ್ರೀಯ ಅಂಗವಿಕಲರ ದಿನ’ ಆಚರಣೆ

ಮೈಸೂರು,ಡಿಸೆಂಬರ್,2,2025 (www.justkannada.in):  ನಾಳೆ ಮೈಸೂರಿನ ಅಖಿಲ ಭಾರತ್ ವಾಕ್ ಶ್ರವಣ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಅಂಗವಿಕಲರ ದಿನದ ಅಂಗವಾಗಿ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ಐಶ್(AIISH) ಸಂಸ್ಥೆಯ ನಾಲೇಡ್ಜ್ ಪಾರ್ಕ್ ನ ಸೆಮಿನಾರ್ ಹಾಲ್ ನಲ್ಲಿ ಬೆಳಿಗ್ಗೆ 10.30ಕ್ಕೆ  ಕಾರ್ಯಕ್ರಮ ನಡೆಯಲಿದ್ದು,  ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ) ಆಯುಕ್ತ ಶೇಖ್ ತನ್ವೀರ್ ಆಸಿಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಭಾರತ ಫ್ರೌಷರ್ ಗ್ರೂಪ್‌ ನ ಮುಖ್ಯಸ್ಥ  ಅಲೋಕ್ ಸಿನ್ಹಾ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದು,  ಐಶ್(AIISH) ನಿರ್ದೇಶಕಿ ಪ್ರೊ. ಎಂ. ಪುಷ್ಪಾವತಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಸ್ಥೆಯಲ್ಲಿ ಕ್ಲಿನಿಕಲ್ ಸೇವೆಗಳನ್ನು ಪಡೆದ ಮತ್ತು ಸಮಾಜಕ್ಕೆ ಗಣನೀಯ ಕೊಡುಗೆ ನೀಡುತ್ತಿರುವ ವಿಕಲಚೇತನರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತಿದೆ. ಅತ್ಯುತ್ತಮ ತಾಯಂದಿರ ಪ್ರಶಸ್ತಿ ಪುರಸ್ಕೃತರು ಮತ್ತು ವಿಕಲಚೇತನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಇದಲ್ಲದೆ, ಎಲ್ಲಾ ಗುಂಪುಗಳ ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಶ್ರವಣ ಸಾಧನಗಳು, ಬಿಡಿಭಾಗಗಳು ಮತ್ತು ಕಾಕ್ಲಿಯರ್ ಇಂಪ್ಲಾಂಟ್‌ ಗಳ ಪರಿಕರಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತದೆ.

Key words: International Day of Persons with Disabilities, Mysore, AIISH